Select Your Language

Notifications

webdunia
webdunia
webdunia
webdunia

ಸಿಎಂ ದೆಹಲಿಯಾತ್ರೆ: ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್..?

ಸಿಎಂ ದೆಹಲಿಯಾತ್ರೆ: ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್..?
ಬೆಂಗಳೂರು , ಬುಧವಾರ, 25 ಆಗಸ್ಟ್ 2021 (09:31 IST)
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ದೆಹಲಿಗೆ ತೆರಳಲಿದ್ದು, ಬಿಜೆಪಿ ವರಿಷ್ಠರ ಬಳಿ ಸಂಪುಟ ವಿಸ್ತರಣೆಯ ಬಗ್ಗೆ ಪ್ರಸ್ತಾಪ ನಡೆಸಲಿದ್ದಾರೆ ಎನ್ನಲಾಗಿದೆ. ಇಂದು ಹೈ ಕಮಾಂಡ್ ನಾಯಕರನ್ನು ಭೇಟಿಯಾಗಲಿರುವ ಸಿಎಂ ಬೊಮ್ಮಾಯಿ, ಸಂಪುಟದಲ್ಲಿ ಉಳಿದಿರುವ ನಾಲ್ಕು ಸ್ಥಾನಗಳ ಭರ್ತಿಗೆ ವರಿಷ್ಠರಿಂದ ಅನುಮತಿ ಕೇಳಲಿದ್ದಾರೆ. ಇನ್ನು ಬಿಜೆಪಿ ಹೈಕಮಾಂಡ್ ಕೂಡ ರಾಜ್ಯ ಸಂಪುಟ ವಿಸ್ತರಣೆಗೆ ಅಸ್ತು ಎನ್ನುವ ಸಾಧ್ಯತೆಯಿದೆ.

ಇನ್ನು ಉಳಿದ ನಾಲ್ಕು ಸ್ಥಾನಕ್ಕಾಗಿ ಹತ್ತಕ್ಕೂ ಹೆಚ್ಚು ಮಂದಿ ಶಾಸಕರು ಕಾದು ಕುಳಿತಿದ್ದಾರೆ. ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಅರವಿಂದ ಬೆಲ್ಲದ್, ಬಸನಗೌಡ ಪಾಟೀಲ್ ಯತ್ನಾಳ್, ಶ್ರೀಮಂತ ಪಾಟೀಲ್, ಶಿವನಗೌಡ ನಾಯಕ್, ರಾಜುಗೌಡ, ಎ.ರಾಮದಾಸ್, ತಿಪ್ಪಾರೆಡ್ಡಿ, ಪೂರ್ಣಿಮಾ ಶ್ರೀನಿವಾಸ್, ದತ್ತಾತ್ರೇಯ ರೇವೂರ್, ಎಂ.ಪಿ.ರೇಣುಕಾಚಾರ್ಯ, ಪ್ರೀತಂಗೌಡ ಸೇರಿದಂತೆ ಹಲವರು ಸಚಿವ ಆಕಾಂಕ್ಷಿಗಳಾಗಿದ್ದಾರೆ ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಲೈಂಗಿಕ ಸುರಕ್ಷತೆಗೆ ಗುಪ್ತಾಂಗವನ್ನೇ ಸೀಲ್ ಮಾಡಿದ! ಕೊನೆಗೆ ಆಗಿದ್ದೇನು?!