ಬೆಂಗಳೂರಿನಲ್ಲಿ ಕೊರೊನಾ ತಡೆ ಕುರಿತು ಇಂದು ಸಭೆ ನಡೆಸಲಿರುವ ಸಿಎಂ ಬಿಎಸ್ ವೈ

ಶನಿವಾರ, 4 ಏಪ್ರಿಲ್ 2020 (10:14 IST)
ಬೆಂಗಳೂರು : ಬೆಂಗಳೂರಿನಲ್ಲಿ ಕೊರೊನಾ ತಡೆ ಬಗ್ಗೆ ಕ್ರಮಕೈಗೊಳ್ಳುವ ಕುರಿತು ಇಂದು ಸಿಎಂ ಬಿಎಸ್ ಯಡಿಯೂರಪ್ಪ ಸಭೆ ನಡೆಸಲಿದ್ದಾರೆ.


ಇಂದು ಬೆಳಿಗ್ಗೆ 11 ಕ್ಕೆ ವಿಧಾನ ಸೌಧದಲ್ಲಿ  ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಸಭೆ ನಡೆಯಲಿದೆ. ಬೆಂಗಳೂರು ವ್ಯಾಪ್ತಿಯ ಶಾಸಕರು, ಸಂಸದರು. ಸಚಿವರು ಈ ಸಭೆಯಲ್ಲಿ ಭಾಗವಹಿಸಲಿದ್ದು, ಬೆಂಗಳೂರಿನಲ್ಲಿ ಕೊರೊನಾ ತಡೆ ಬಗ್ಗೆ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಮುಂದಿನ ಕ್ರಮದ ಬಗ್ಗೆ ಮಾಹಿತಿ ಸಂಗ್ರಹಿಸಲಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸಿಂಗಾಪುರ್ ನಲ್ಲಿ ಮತ್ತೆ ಒಂದು ತಿಂಗಳು ಲಾಕ್ ಡೌನ್: ನಮಗೂ ಇದೇ ಗತಿಯೇ?