Webdunia - Bharat's app for daily news and videos

Install App

TATAದಲ್ಲಿ ಕೆಲಸ ಮಾಡಿದ್ರು ಸಿಎಂ ಬೊಮ್ಮಾಯಿ..! ಗಾಲ್ಫ್ , ಕ್ರಿಕೆಟ್ ಫೇವರೇಟ್

Webdunia
ಬುಧವಾರ, 28 ಜುಲೈ 2021 (16:42 IST)
ಬೆಂಗಳೂರು(ಜು.28): ಕರ್ನಾಟಕದ ನೂತನ ಮುಖ್ಯಮಂತ್ರಿ 61 ವರ್ಷದ ಬಸವರಾಜ್ ಬೊಮ್ಮಾಯಿ ಅವರು ಟಾಟಾ ಕಂಪನಿಯಲ್ಲಿ ಕೆಲಸ ಮಾಡಿದ್ದರು ಎಂದುಬುದು ನಿಮಗೆ ಗೊತ್ತಾ ? ಹೌದು. ಕರ್ನಾಟಕ ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸದ ಬೊಮ್ಮಾಯಿ ಓದಿದ್ದು ಮೆಕ್ಯಾನಿಕಲ್ ಎಂಜಿನಿಯರಿಂಗ್.

•ಟಾಟಾ ಕಂಪನಿಯಲ್ಲಿ ಕೆಲಸ ಮಾಡಿದ್ದ ಕರ್ನಾಟಕ ಸಿಎಂ
•ರಾಜಕೀಯ ಹಿನ್ನೆಲೆ ಕುಟುಂಬದಿಂದ ಬಂದರೂ ಮೆಕ್ಯಾನಿಕಲ್ ಎಂಜಿನಿಯರಿಂಗ್ ಓದಿದ ಬೊಮ್ಮಾಯಿ
ಮಾಜಿ ಗೃಹ ಸಚಿವ, ಮಾಜಿ ಸಿಎಂ ಬಿಎಸ್ವೈ ಅವರ ಆಪ್ತ ಸಹಾಯಕರಾಗಿದ್ದ ಬೊಮ್ಮಾಯಿ ಅವರು ರಾಜಕೀಯ ಹಿನ್ನೆಲೆ ಇರುವ ಕುಟುಂಬದಿಂದಲೇ ಬಂದವರು. ರಾಜಕೀಯ ಹಿನ್ನೆಲೆ ಇದ್ದರೂ ಇವರು ಕಲಿತದ್ದು ಮೆಕ್ಯಾನಿಕಲ್ ಎಂಜಿನಿಯರಿಂಗ್.
ಬೊಮ್ಮಾಯಿ ಅವರು ಉದ್ಯಮಿಗುವ ಮೊದಲು ಪುಣೆಯ ಟಾಟಾ ಮೋಟಾರ್ಸ್ನಲ್ಲಿ ಮೂರು ವರ್ಷಗಳ ಕಾಲ ಕೆಲಸ ಮಾಡಿದ್ದರು. ಯಡಿಯೂರಪ್ಪ ಅವರಂತೆ ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿದ ಬೊಮ್ಮಾಯಿ ಅವರು ಮೊದಲು 1998 ರಲ್ಲಿ ಕರ್ನಾಟಕ ವಿಧಾನ ಪರಿಷತ್ತಿಗೆ ಆಯ್ಕೆಯಾದರು. ಜೆಡಿಎಸ್ ತೊರೆದು 2008 ರಲ್ಲಿ ಬಿಜೆಪಿಗೆ ಸೇರಿದರು.
ಅವರು ಮುಖ್ಯಮಂತ್ರಿಯಾಗಿದ್ದ ಜೆ.ಎಚ್. ಪಾಟೇಲ್ ಅವರಿಗೆ ರಾಜಕೀಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಆಸಕ್ತಿಗಳಲ್ಲಿ ಗಾಲ್ಫ್ ಮತ್ತು ಕ್ರಿಕೆಟ್ ಇವೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments