Publish Date: Fri, 20 May 2022 (15:17 IST)
Updated Date: Fri, 20 May 2022 (15:19 IST)
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಾಕಷ್ಟು ಮಳೆಯಾಗುತ್ತಿದೆ..ಮಳೆ ಹಾನಿ ಪ್ರದೇಶಗಳಿಗೆ ಇಂದೂ ಸಹ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪೈ ಬಡಾವಣೆಯಲ್ಲಿ ರಾಜಕಾಲುವೆ ಪರಿವೀಕ್ಷಣೆ ಬಳಿಕ ಮಾತನಾಡಿದ ಸಿಎಂ, ಬೇರೆ ಬೇರೆ ಪ್ರದೇಶಗಳಲ್ಲಿ ಜನರು ಸಮಸ್ಯೆಗೆ ಸಿಲುಕಿದ್ದಾರೆ. ಅವರ ಸಮಸ್ಯೆ ಬಗೆಹರಿಸುವುದು ಮುಖ್ಯವಾಗಿದೆ. ಇಂಜಿನಿಯರ್ಗೆ ನಾನು ಆದೇಶ ಕೊಟ್ಟಿದ್ದೇನೆ. ಇನ್ನೂ ಐದಾರು ತಿಂಗಳಲ್ಲಿ ಮೇಜರ್ ಸಮಸ್ಯೆ ಕ್ಲಿಯರ್ ಆಗುತ್ತೆ ಎಂದು ಹೇಳಿದ್ರು..
ಅಲ್ಲಿರೋ ಸಮಸ್ಯೆ & ಇಲ್ಲಿರೋ ಸಮಸ್ಯೆ ಎರಡೂ ಕಾಮನ್. ಇಂಜಿನಿಯರ್ಗಳಿಗೆ ಈಗಾಗಲೇ ನಾನು ಸೀವೇಜ್ ಟ್ರೀಟ್ಮೆಂಟ್ ಪ್ಲಾಂಟ್ ಅಳವಡಿಸಲು ಆದೇಶ ಕೊಟ್ಟಿದ್ದೇನೆ ಎಂದು ತಿಳಿಸಿದರು.