Select Your Language

Notifications

webdunia
webdunia
webdunia
webdunia

ದಸರಾದಲ್ಲಿ ಶಾಂತಿಯಿಂದ ಪಾಲ್ಗೊಳ್ಳುವಂತೆ ಜನರಲ್ಲಿ ಸಿಎಂ ಮನವಿ

ದಸರಾದಲ್ಲಿ ಶಾಂತಿಯಿಂದ ಪಾಲ್ಗೊಳ್ಳುವಂತೆ ಜನರಲ್ಲಿ ಸಿಎಂ ಮನವಿ
ಮೈಸೂರು , ಮಂಗಳವಾರ, 8 ಅಕ್ಟೋಬರ್ 2019 (11:11 IST)
ಮೈಸೂರು : ಇಂದು ನಾಡಿನಾದ್ಯಂತ ವಿಜಯದಶಮಿ ಹಬ್ಬದ ಸಂಭ್ರಮ ಮನೆಮಾಡಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಾಡಿನ ಜನತೆಗೆ ವಿಜಯದಶಮಿಯ ಶುಭಾಶಯ ಕೋರಿದ್ದಾರೆ.




 


ತಾಯಿ ಚಾಮುಂಡೇಶ್ವರಿ ಹಾಗು ಶ್ರೀ ದುರ್ಗಾ ಮಾತೆಯ ಅನುಗ್ರಹ ನಮ್ಮೆಲ್ಲರಿಗೂ ಸನ್ಮಂಗಲವನ್ನುಂಟು ಮಾಡಲಿ. ವಿಜಯದಶಮಿಯ ಸಮಸ್ತ ಜನರ ಜೀವನದಲ್ಲೂ ಜಯವನ್ನು ಕರುಣಿಸಲಿ, ಸಂತೋಷ , ಸಮೃದ್ಧಿ ಮತ್ತು ಪ್ರಗತಿಯನ್ನು ತರಲಿ ಎಂದು ಸಿಎಂ ಟ್ವೀಟ್ ಮೂಲಕ ಜನತೆಗೆ ಹಾರೈಸಿದ್ದಾರೆ.


ಇಂದು ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ ಸಿಎಂ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸಚಿವ ವಿ ಸೋಮಣ್ಣ ನೇತೃತ್ವದಲ್ಲಿ ದಸರಾ ಅದ್ಧೂರಿಯಾಗಿ ನಡೆಯುತ್ತಿದೆ. ಎಲ್ಲ ಅಚ್ಚುಕಟ್ಟಾಗಿ ನಡೆಯಲಿ ಎಂದು ದೇವಿಯಲ್ಲಿ ಪ್ರಾರ್ಥಿಸೋಣ ಎಂದಿದ್ದಾರೆ. ಅಲ್ಲದೆ  ದಸರಾದಲ್ಲಿ ಶಾಂತಿಯಿಂದ ಪಾಲ್ಗೊಳ್ಳವಂತೆ ಮನವಿ ಮಾಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯ ವಿರುದ್ಧ ಹೈಕಮಾಂಡ್ ಗೆ ಸಂದೇಶ ರವಾನಿಸಿದ ಮೂಲ ಕಾಂಗ್ರೆಸಿಗರು