Select Your Language

Notifications

webdunia
webdunia
webdunia
webdunia

ಬಟ್ಟೆ ಹರಿದ ಪೊಲೀಸರು: ಕೈ ನಾಯಕ ವೇಣುಗೋಪಾಲ್ ಅಸ್ವಸ್ಥ

ಬಟ್ಟೆ ಹರಿದ ಪೊಲೀಸರು: ಕೈ ನಾಯಕ ವೇಣುಗೋಪಾಲ್ ಅಸ್ವಸ್ಥ
bangalore , ಸೋಮವಾರ, 13 ಜೂನ್ 2022 (20:52 IST)
ನಾಯಕ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರನ್ನು ಇಡಿ ವಿಚಾರಣೆಗೆ ಒಳಪಡಿಸಿರುವುದನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಬೆಂಗಳೂರಿನಲ್ಲಿ ಸೋಮವಾರ ಪ್ರತಿಭಟನೆ ನಡೆಸುವ ವೇಳೆ ಪೊಲೀಸರು ಕೈ ನಾಯಕ ವೇಣುಗೋಪಾಲ್ ಅವರ ಬಟ್ಟೆ ಹರಿದಿದ್ದು, ಈ ವೇಳೆ ನಡೆದ ತಳ್ಳಾಟದಲ್ಲಿ ಅವರು ಅಸ್ವಸ್ಥಗೊಂಡ ಘಟನೆ ನಡೆದಿದೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಇಡಿ ಮುಂದೆ ರಾಹುಲ್ ಗಾಂಧಿ ವಿಚಾರಣೆಗೆ ಹಾಜರಾಗಿದ್ದು, ಅವರಿಗೆ ಪ್ರಿಯಾಂಕಾ ಗಾಂಧಿ ಸಹ ಸಾಥ್ ಕೊಟ್ಟಿದ್ದಾರೆ. ಈ ವೇಳೆ ಇಡಿ ಕಚೇರಿ ಹೊರಗೆ ಇದ್ದ ಕಾಂಗ್ರೆಸ್ ಕಾರ್ಯಕರ್ತರು ಅವರಿಗೆ ಬೆಂಬಲ ಸೂಚಿಸಲು ಎಐಸಿಸಿ ಕಚೇರಿಯಿಂದ ಇಡಿ ಕಚೇರಿವರೆಗೂ ಪಾದಯಾತ್ರೆ ಮಾಡಿದರು. 
ಈ ವೇಳೆ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಏಳು ಬಸ್ಗಳಲ್ಲಿ ತುಂಬಿಕೊಂಡು ಹೋಗಿದ್ದಾರೆ. ಇಡಿ ಕಚೇರಿ ಬಳಿ ಬಂದಿದ್ದ ಕಾಂಗ್ರೆಸ್ ನಾಯಕರಾದ ಕೆ.ಸಿ.ವೇಣುಗೋಪಾಲ್ ಮತ್ತು ಡಿ.ಕೆ.ಸುರೇಶ್ ಮತ್ತಿತರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ವೇಳೆ ಪೊಲೀಸರು ವೇಣುಗೋಪಾಲ್ ಅವರ ಅಂಗಿಯನ್ನು ಹರಿದಿದ್ದು, ಅವರು ಅಸ್ವಸ್ಥರಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇ.ಡಿ ಕಚೇರಿ ಬಳಿ ನಡೆದ ಪ್ರತಿಭಾಟನೆಯಲ್ಲಿ ಕಾಂಗ್ರೆಸ್ ನಾಯಕರ ಮಾತು