ನ್ಯಾಷನಲ್ ಹೆರಾಲ್ಡ್ ಪ್ರಕರಣ ಸಂಬಂಧ ಜಾರಿ ನಿದೇರ್ಶನಾಲಯ( ಇಡಿ) ತನಿಖೆ ನಡೆಸುತ್ತಿದ್ದು, ಈ ಹಂತದಲ್ಲಿ ಪ್ರತಿಭಟನೆ ನಡೆಸುವುದು ಸರಿಯಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ
ಅವರು ಕಾಂಗ್ರೆಸ್ ಪ್ರತಿಭಟನೆಗೆ ಆಕ್ಷೇಪಿಸಿದ್ದಾರೆ.
ಬೀಳಗಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇಡಿ ತನಿಖೆ ನಡೆಯುತ್ತಿರುವುದರಿಂದ ,ಕಾನೂನಿಗಿಂತ ಯಾರೂ ದೊಡ್ಡವರಲ್ಲ.ಯಾರೇ ಇರಲಿ ತನಿಖೆಗೆ ಸಹಕರಿಬೇಕು
ಎಂದು ಮನವಿ ಮಾಡಿದರು.
ನಾವು ಅಧಿಕಾರಿಗಳಿಗೆ ಮುಕ ಸ್ವಾತಂತ್ರ್ಯ ನೀಡಬೇಕು.
ತನಿಖೆ ನಡೆದಾಗ ಸತ್ಯಾಂಶ ಗೊತ್ತಾಗುತ್ತದೆ. ತನಿಖಾ ಹಂತದಲ್ಲಿಈ ರೀತಿ ಪ್ರತಿಭಟನೆ ನಡೆಸುವುದು ಸರಿಯಲ್ಲ ಎಂದು ಹೇಳಿದರು. ಇಡಿ ದೇಶದಲ್ಲಿ, ಜಗತ್ತಿನಲ್ಲಿ ಕಾನೂನಿಗಿಂತ ಯಾರೊಬ್ಬರೂ ದೊಡ್ಡವರಿಲ್ಲ.ಇದನ್ನು ಸ್ವತಃ ಈ ಹಿಂದೆ ಕಾಂಗ್ರೆಸ್ ಪಕ್ಷದವರೇ ಹೇಳುತ್ತಿದ್ದರು. ಇದನ್ನು ಅವರು, ಅರ್ಥಮಾಡಿಕೊಳ್ಳಬೇಕು ಎಂದು ನಿರಾಣಿ ಅವರು ತಿರುಗೇಟು ನೀಡಿದರು.
ತನಿಖೆ ಹಂತದಲ್ಲಿರುವಾಗಲೇ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸುವುದನ್ನು ನೋಡಿದರೆ,
ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡಿಕೊಂಡ್ರು ಅನ್ನುವ ಹಾಗೆ ಇದೆ ಎಂದು ವ್ಯಂಗ್ಯವಾಡಿದರು.
ಹಾಗಾಗಿ ಯಾವುದೇ ಹೋರಾಟ ಮಾಡಲಾರದೇ ಇಡಿ ತನಿಖೆಗೆ ಸಹಕರಿಬೇಕು ಎಂದ ನಿರಾಣಿ ಅವರು ಮನವಿ ಮಾಡಿಕೊಂಡರು.
ಐ ಟಿ, ಇಡಿ ಇಟ್ಟುಕೊಂಡು ಬಿಜೆಪಿ ಹೆದರಿಸುವ ಕೆಲಸ ಮಾಡುತ್ತದೆ ಎಂಬುದು ಸತ್ಯಕ್ಕೆ ದೂರವಾದ ಆರೋಪ.
ಸಿದ್ದರಾಮಯ್ಯ ಮತ್ತು , ಡಿಕೆಶಿ ಅವರು ಮಾಡಿರುವ
ಆರೋಪದಲ್ಲಿ ಸತ್ಯಾಂಶ ಇಲ್ಲ ಎಂದು ಸ್ಪಷ್ಟಪಡಿಸಿದರು.
ತನಿಖೆ ಹಂತದಲ್ಲಿ ಇರುವುದರಿಂದ ಒಮ್ಮೆಲೆ ನಿರ್ಧಾರಕ್ಕೆ ಬರುವುದು ಅಷ್ಟು ಸೂಕ್ತ ಅಲ್ಲ. ಕಾಂಗ್ರೆಸ್ ಆರೋಪ ಸತ್ಯಕ್ಕೆ ದೂರ ಆಗಿದೆ ಎಂದರು.
ಬಿಜೆಪಿಗರನ್ನು ಸೀಳುನಾಯಿಗೆ ಹೊಲಿಸಿದ ಸಿದ್ದರಾಮಯ್ಯ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು
ಸಿದ್ದರಾಮಯ್ಯ ಹಿರಿಯರು, ಸಿಎಂ ಆದವರು,
ಸಿದ್ದರಾಮಯ್ಯಗೆ ಸಲಹೆ ಕೊಡವಷ್ಟು ದೊಡ್ಡವರು ನಾವಲ್ಲ. ಹೊಸದಾಗಿ ಬಂದಂತ ರಾಜಕಾರಣಿಗಳು ಹಿರಿಯರನ್ನು ಅನುಕರಣೆ ಮಾಡುತ್ತಾರೆ. ಅನುಕರಣೆ ಮಟ್ಟದಲ್ಲಿ ಮಾರ್ಗದರ್ಶನ, ಸಲಹೆ ಇರಬೇಕು ಎಂದು