ಬೆಂಗಳೂರು : ಚುನಾವಣೆ ಹೊತ್ತಲ್ಲೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ಗೆ ಮತ್ತೆ ಭೂಕಂಟಕ ಎದುರಾಗಿದೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣ ಡಿಕೆಗೆ ಉರುಳಾಗುತ್ತಾ ಎಂಬ ಪ್ರಶ್ನೆ ಎದ್ದಿದೆ.
ಏಪ್ರಿಲ್-ಮೇ ಒಳಗೆ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಬಹುತೇಕ ಫೆಬ್ರವರಿ ವೇಳೆಯಲ್ಲಿ ಸಿಬಿಐ ದೋಷಾರೋಪಪಟ್ಟಿ ಸಲ್ಲಿಕೆ ಮಾಡುವ ಸಾಧ್ಯತೆಯಿದೆ.
ಹೀಗಾಗಿ ಚುನಾವಣಾ ವರ್ಷದಲ್ಲಿ ಬಿಜೆಪಿ ಇದನ್ನೇ ಲಾಭ ಮಾಡಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ಎಫ್‍ಐಆರ್ ಅಲ್ಲಿ 75 ಕೋಟಿ ರೂ. ಅಕ್ರಮ ಆಸ್ತಿ ಅಂತ ಸಿಬಿಐ ಉಲ್ಲೇಖಿಸಿದ್ದು, ಮೌಲ್ಯ ಮಾಪನದಿಂದ ಮತ್ತಷ್ಟು ಮಾಹಿತಿ ಹೊರ ಬರುವ ಸಾಧ್ಯತೆಯಿದೆ.