BJP- ‘ಕೈ’ ಕಾರ್ಯಕರ್ತರ ಚಕಮಕಿ

Webdunia
ಬುಧವಾರ, 9 ನವೆಂಬರ್ 2022 (17:20 IST)
ಕಲಬುರಗಿಯ ಚಿತ್ತಾಪುರ ಕ್ಷೇತ್ರದಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ ಕಾಣೆಯಾಗಿದ್ದಾರೆ ಎಂದು BJP ಪೋಸ್ಟರ್​​​​ ಅಂಟಿಸಿತ್ತು. ಇದು BJP ಮತ್ತು ಕಾಂಗ್ರೆಸ್​​​​​ ಕಾರ್ಯಕರ್ತರ ನಡುವೆ ಕಿತ್ತಾಟಕ್ಕೆ ಕಾರಣವಾಗಿದೆ. ಪೋಸ್ಟರ್​ ವಿಚಾರವಾಗಿ ಕಾಂಗ್ರೆಸ್, BJP ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಚಿತ್ತಾಪುರ ಕ್ಷೇತ್ರದ ವಾಡಿ ಪಟ್ಟಣದ ಪೊಲೀಸ್ ಠಾಣೆ ಎದುರು ಲಾಠಿ ಚಾರ್ಜ್ ನಡೆದಿದೆ. ಬಿಜೆಪಿ ಮುಖಂಡ ಅರವಿಂದ್ ಚೌವ್ಹಾಣ್ ಶಾಸಕ ಪ್ರಿಯಾಂಕ್ ಖರ್ಗೆ ಕಾಣೆಯಾಗಿದ್ದಾರೆ ಎಂಬ ಪೋಸ್ಟರ್​ಗಳನ್ನು ತಾಲೂಕಿನಾದ್ಯಂತ ಅಂಟಿಸಿದ್ರು. ​ಇದಕ್ಕೆ ಸಿಟ್ಟಿಗೆದ್ದ ಕಾಂಗ್ರೆಸ್​ ಕಾರ್ಯಕರ್ತರು BJP  ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ. ಈ ಕುರಿತು ಪೊಲೀಸ್​​​​​​​​​​​​​​​​ ಠಾಣೆಗೆ ದೂರು ನೀಡಲು BJP ಕಾರ್ಯಕರ್ತರು ಬಂದಿದ್ದು, ಇದೇ ವೇಳೆ ಕಾಂಗ್ರೆಸ್​​​ ಕಾರ್ಯಕರ್ತರು ಕೂಡ ಠಾಣೆಗೆ ಎಂಟ್ರಿ ಕೊಟ್ಟಿದ್ದಾರೆ. ಬಳಿಕ ಎರಡು ಗುಂಪಿನ ನಡುವೆ ಮಾತಿನ ಚಕಮಕಿ ಉಂಟಾಗಿದೆ. ಠಾಣೆ ಮುಂದೆ ಜಮಾಯಿಸಿದ್ದ BJP, ಕಾಂಗ್ರೆಸ್ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಲಘು ಲಾಠಿ ಚಾರ್ಜ್​​​​​ ನಡೆಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಂಬಂಧಿ ಮೇಲೆ ನಿರಂತರ ರೇಪ್, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟ ಕಾಮುಕ

ಬಿಗ್‌ಬಾಸ್ ಸೀಸನ್ 12, ಕ್ಷಮೆಯೊಂದಿಗೆ ಮುನಿಸಿಗೆ ಅಂತ್ಯ ಹಾಡಿದ ಗಿಲ್ಲಿ, ಅಶ್ವಿನಿ ಗೌಡ

ರಾಷ್ಟ್ರ ರಾಜಧಾನಿಯತ್ತ ಡಿಕೆ ಶಿವಕುಮಾರ್ ಪ್ರಯಾಣ, ಹಿಂದಿದೆ ಈ ಕಾರಣ

ಓಡಿಲ್ನಾಳ ಬಾಲಕ ಸಾವು ಪ್ರಕರಣ: ಹೊಸ ತಿರುವು ಪಡೆದ ತನಿಖೆ

ಬಿಜೆಪಿಗೆ ಮರಳುv ಬಗ್ಗೆ ಕೆಎಸ್ ಈಶ್ವರಪ್ಪ ಸ್ಫೋಟಕ ಮಾತು

ಮುಂದಿನ ಸುದ್ದಿ
Show comments