Select Your Language

Notifications

webdunia
webdunia
webdunia
webdunia

ಯಾತ್ರೆ ವೇಳೆ ಕುಸಿದು ಮುಖಂಡ ಸಾವು

The leader died after collapsing during the yatra
ಮಹಾರಾಷ್ಟ್ರ , ಬುಧವಾರ, 9 ನವೆಂಬರ್ 2022 (17:08 IST)
ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ವೇಳೆ ಕಾಂಗ್ರೆಸ್ ಮುಖಂಡರೊಬ್ಬರು ಹೃದಯಾಘಾತದಿಂದ ನಿಧನರಾದ ಘಟನೆ ನಡೆದಿದೆ. ಯಾತ್ರೆ ಮಹಾರಾಷ್ಟ್ರದ ಗಡಿ ಪ್ರವೇಶಿಸಿದ್ದು, ಈ ವೇಳೆ ಕಾಂಗ್ರೆಸ್ ಸೇವಾದಳದ ಮುಖಂಡ ಕೃಷ್ಣಕುಮಾರ್ ಪಾಂಡೆ ನಿಧನರಾಗಿದ್ದಾರೆ. ಪಾಂಡೆ ಅವರು ಕಾಂಗ್ರೆಸ್‌ನ ಸೇವಾದಳದ ಪ್ರಧಾನ ಕಾರ್ಯದರ್ಶಿಯಾಗಿದ್ದು, ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.  ಮೆರವಣಿಗೆ ವೇಳೆ ಕುಸಿದು ಬಿದ್ದ ಪಾಂಡೆ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಪಾಂಡೆ ನಿಧನಕ್ಕೆ ರಾಹುಲ್ ಗಾಂಧಿ ತೀವ್ರವಾದ ಸಂತಾಪ ಸೂಚಿಸಿದ್ದಾರೆ. ತಮ್ಮ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿರುವ ಅವರು, ಕಾಂಗ್ರೆಸ್ ಸೇವಾದಳದ ಪ್ರಧಾನ ಕಾರ್ಯದರ್ಶಿ ಕೃಷ್ಣಕಾಂತ್ ಪಾಂಡೆ ಅವರ ನಿಧನ ಇಡೀ ಕಾಂಗ್ರೆಸ್ ಕುಟುಂಬಕ್ಕೆ ದುಃಖ ತಂದಿದೆ. ಅವರ ಪ್ರೀತಿಪಾತ್ರರಿಗೆ ನನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇನೆ ಎಂದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ನೇಪಾಳದಲ್ಲಿ ಭೂಕಂಪ; 6 ಸಾವು