ಸ್ಥಳೀಯ ಜನಪ್ರತಿನಿಧಿಯಾಗಿದ್ದರಿಂದ ಹಾಗೆ ಹೇಳಿರಬಹುದು- ಈಶ್ವರಪ್ಪ ಹೇಳಿಕೆಗೆ ಸಿಟಿ ರವಿ ಸಮರ್ಥನೆ

Webdunia
ಸೋಮವಾರ, 21 ಫೆಬ್ರವರಿ 2022 (18:23 IST)
ಬೆಂಗಳೂರು: ಸಚಿವ ಕೆ.ಎಸ್ ಈಶ್ವರಪ್ಪ ಸ್ಥಳೀಯ ಜನಪ್ರತಿನಿಧಿ. ಹೀಗಾಗಿ ಅವರು ಹಾಗೆ ಹೇಳಿರಬಹುದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ,ಟಿ ರವಿ ಸಮರ್ಥನೆ ಮಾಡಿಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ನಡೆದ ಕೊಲೆ ಖಂಡನೀಯ. ಆದಷ್ಟೂ ಶೀಘ್ರವಾಗಿ ಕೊಲೆ ಮಾಡಿದವರನ್ನು ಬಂಧಿಸಬೇಕು. ಅವರು ಸ್ಥಳೀಯ ಜನ ಪ್ರತಿನಿಧಿ. ಹೀಗಾಗಿ ಈಶ್ವರಪ್ಪ ಅವರು ಮುಸ್ಲಿಂ ಗೂಂಡಾಗಳು ಕೊಲೆ ಮಾಡಿದ್ದಾರೆ ಎಂದು ಹೇಳಿರಬಹುದು ಎಂದು ತಿಳಿಸಿದ್ದಾರೆ.
ನಿನ್ನೆ ರಾತ್ರಿ ಸಕ್ರಿಯವಾಗಿದ್ದ ಕಾರ್ಯಕರ್ತ ಹರ್ಷನ ಕೊಲೆ ಮಾಡಿದ್ದಾರೆ. ಕೊಲೆಗೆ ಕಾರಣರಾದವರ ಬಂಧನ ಆಗಬೇಕು. ಇದು ಮೇಲ್ನೋಟಕ್ಕೆ ಪೂರ್ವಯೋಜಿತ ಕೊಲೆ ಥರ ಕಾಣ್ತಿದೆ. ತನಿಖೆಗೂ ಮುನ್ನ ನಾನು ಏನೂ ಹೇಳಲ್ಲ. ಕೊಲೆಗೆ ಕಾರಣ ಗೊತ್ತಾಗಲಿ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಇದೇ ವೇಳೆ ರಾಜ್ಯದಲ್ಲಿ ಹಿಜಬ್ ವಿವಾದ ಸಂಬಂಧ ಪ್ರತಿಕ್ರಿಯಿಸಿ, ಹಿಜಬ್ ಬೇಕೋ ಬೇಡವೋ ಅನ್ನೋದು ಈಗ ಪ್ರಶ್ನೆ ಅಲ್ಲ. ಸಮವಸ್ತ್ರ ಬೇಕೋ ಬೇಡವೋ ಅನ್ನೋದು ಪ್ರಶ್ನೆ. ಇದನ್ನು ನಾನು ಬುದ್ಧಿಜೀವಿಗಳಿಗೆ ಕೇಳಲು ಬಯಸುತ್ತೇನೆ ಎಂದು ಹೇಳಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಲಂಚ ಸ್ವೀಕರ: ರೆಡ್‌ಹ್ಯಾಂಡ್‌ ಆಗಿ ಲಾಕ್ ಆದ ಮೀನುಗಾರಿಕೆ ಇಲಾಖೆಯ ಸೂಪರ್‌ವೈಸರ್‌

ಹಾವೇರಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ: ಸಿಎಂ ಸಿದ್ದರಾಮಯ್ಯ

ತುಂಡಾಗಿ ಬಿದ್ದ ವಿದ್ಯುತ್ ತಂತಿ, 900ಕ್ಕೂ ಅಧಿಕ ಅಡಕೆ ಸಸಿಗಳು ನಾಶ

2025ರಲ್ಲಿ ಕರ್ನಾಟಕದಲ್ಲಿ ಅತಿ ಹೆಚ್ಚು ಅಂಗಾಂಗ ದಾನ, ರಾಷ್ಟ್ರ ಮಟ್ಟದಲ್ಲಿ ಮೂರನೇ ಸ್ಥಾನ

ಸಿಎಂ ಕುರ್ಚಿ ಗುದ್ದಾಟದ ನಡುವೆ ಜನರ ಆಶೀರ್ವಾದವಿರಬೇಕೆಂದ ಸಿದ್ದರಾಮಯ್ಯ, ಭಾರೀ ಕುತೂಹಲ

ಮುಂದಿನ ಸುದ್ದಿ
Show comments