Webdunia - Bharat's app for daily news and videos

Install App

ನಗರದ ಶುಚಿತ್ವಕ್ಕಾಗಿ ನಾಗರೀಕರ ಪಾಲ್ಗೊಳ್ಳುವಿಕೆ" ವಿನೂತನ ಕಾರ್ಯಕ್ರಮ

Webdunia
ಮಂಗಳವಾರ, 24 ಆಗಸ್ಟ್ 2021 (20:52 IST)
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆಯ ಪಾಲಿಕೆಯ ಜವಾಬ್ದಾರಿ, ವಲಯ ಕಛೇರಿಗಳ ಮೂಲಕ ನಿರ್ವಹಿಸಲಾಗುತ್ತಿದೆ. ಘನತ್ಯಾಜ್ಯವನ್ನು ಮೂಲದಲ್ಲಿಯೇ ವಿಂಗಡಿಸಿ, ಸಂಗ್ರಹಣೆ, ಸಾಗಣೆ ಮತ್ತು ಸಂಸ್ಕರಿಸಿ ವಿಲೇವಾರಿ ಮಾಡಲು ಕೇಂದ್ರ ಸರ್ಕಾರವು ಸಹ ಘನತ್ಯಾಜ್ಯ ನಿರ್ವಹಣೀಯಮಗಳು -2016 ಗಳನ್ನು ಜಾರಿಗೆ ತಂದಿದೆ.
 
ಅದರಂತೆ ನಗರದ ಶುಚಿತ್ವವನ್ನು ಕಾಪಾಡುವುದು ಪ್ರಾಥಮಿಕವಾಗಿ ಪಾಲಿಕೆಯ ಜವಾಬ್ದಾರಿಯಾದರೂ, ಸದರಿ ಕಾರ್ಯದಲ್ಲಿ ಸಮಾಜದ ನಾಗರೀಕರ ಪಾಲ್ಗೊಳ್ಳುವಿಕೆ ಅತ್ಯಗತ್ಯವಾಗಿದೆ, ನಾಗರೀಕರದ್ದು ಸಮನಾಂತರದ ಜವಾಬ್ದಾರಿಯಾಗಿದೆ. ಸಮಾಜದ ನಾಗರೀಕರ ಮನಸ್ಥಿತಿ ಬದಲಾವಣೆಯು ಬಹುಮುಖ್ಯ ಅಂಶವಾಗಿದೆ, ನಗರದ ಶುಚಿತ್ವದ ಕಡೆಗೆ ವಾಲಿಸಲು ಯೋಜಿಸಲಾಗಿದೆ, ಪಾಲಿಕೆಯ ನಗರದ ಸಮಾನ ಮನಸ್ಕರ ಬಳಕೆಯ ಸ್ವಯಂ ಸೇವಕರ ಜೊತೆಗೂಡಿ ಘನತ್ಯಾಜ್ಯ ನಿರ್ವಹಣಾ ನಿಯಮಗಳು -2016 ಅನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ನಗರವನ್ನು ಬಳಸುತ್ತಿದೆ "ನಗರದ ಶುಚಿತ್ವಕ್ಕಾಗಿ ನಾಗರೀಕರ ಪಾಲ್ಗೊಳ್ಳುವಿಕೆ" ವಿನೂತನ ಕಾರ್ಯಕ್ರಮವನ್ನು ರೂಪಿಸಲಾಗಿದೆ. 
 
ಸದರಿ ಕಾರ್ಯಕ್ರಮ, ಎಲೆ ಲೇನ್ ಮಟ್ಟದ ಸ್ವಯಂ ಸೇವಕರು, ಬ್ಲಾಕ್ ಮಟ್ಟದಲ್ಲಿ ಶುಚಿ ಮಿತ್ರರು, ವಾರ್ಡ್/ವಿಭಾಗೀಯ ಮಟ್ಟದ ಸಂಯೋಜಕರು, ವಲಯ ಮಟ್ಟದ ಅಪೆಕ್ಸ್ ಸಂಯೋಜಕರು ಎಂಬ ಪದನಾಮದೊಂದಿಗೆ ಶುಚಿ ಮಿತ್ರರನ್ನು ನಿಯೋಜಿಸಿದ ನಂತರ, ಪಾಲಿಕೆಯ ಅಧಿಕಾರಿ ಸಮನ್ವಯ ಮಾಹಿತಿಯನ್ನು ಸಾಧಿಸಿ, ತಮ್ಮ ತಮ್ಮ ಲೇನ್/ಬ್ಲಾಕ್/ವಾರ್ಡ್/ವಿಭಾಗ/ವಲಯದ ಲಿಂಕ್ ಕಾರ್ಯಕರ್ತರನ್ನು ಮನೆ ಮನೆಗೆ ತೆರಳಿ ಜಾಗೃತಿಯನ್ನು ಮೂಡಿಸುವುದು, ಸಾಮೂಹಿಕ ಪ್ರಚಾರವನ್ನು ಕೈಗೊಳ್ಳುವುದು, ವಾರ್ಡ್ ಸಮಿತಿ ಸಭೆಯಲ್ಲಿ ಚರ್ಚಿಸಿ ತಂತ್ರಜ್ಞರ ಸಹಾಯದಿಂದ ಪರಿಹಾರಗಳನ್ನು ನೀಡುವುದು ಇತ್ಯಾದಿ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. 
 
ಈ ವಿನೂತನ "ನಗರದ ಶುಚಿತ್ವಕ್ಕಾಗಿ ನಾಗರೀಕರ ಪಾಲ್ಗೊಳ್ಳುವಿಕೆ" ಕಾರ್ಯಕ್ರಮದ ದಿನಾಂಕ: 25.08.2021 ರಂದು ಬೆಳಿಗ್ಗೆ 11.00 ಘಂಟೆಗೆ ನಗರದ ಟೌನ್ ಹಾಲ್ ಸ್ಥಳ "ನಮ್ಮ ನಡೆ, ಅದರ ಪಕ್ಕದ ಕಡೆ" ಎಂಬ ಗುರಿಯೊಂದಿಗೆ ಮತ್ತು "ನಮ್ಮ ಕಸ, ನಮ್ಮ ಜವಾಬ್ದಾರಿ" ಎಂಬ ಧೈಯ ವಾಕ್ಯದೊಂದಿಗೆ, ಪ್ರಾರಂಭಿಸಿ ಅನುಷ್ಠಾನವನ್ನು ಒದಗಿಸಲಾಗಿದೆ.


 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments