ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಸರ್ಕಲ್ ಇನ್ಸ್‌ಪೆಕ್ಟರ್ ‌ಆತ್ಮಹತ್ಯೆ

Webdunia
ಮಂಗಳವಾರ, 18 ಅಕ್ಟೋಬರ್ 2016 (09:19 IST)
ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಸರ್ಕಲ್ ಇನ್ಸ್‌ಪೆಕ್ಟರ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೋಲಾರದ ಮಾಲೂರು ಪೊಲೀಸ್ ಠಾಣೆಯಲ್ಲಿ ಈ ದುರ್ಘಟನೆ ನಡೆದಿದೆ. 
ಮೃತರು ಕಳೆದ ಒಂದುವರೆ ವರ್ಷಗಳಿಂದ ಕೋಲಾರದ ಮಾಲೂರು ಪಟ್ಟಣದ ಠಾಣೆಯಲ್ಲಿ ಸರ್ಕಲ್ ಇನ್ಸಪೆಕ್ಟರ್ ಆಗಿದ್ದರು. 
 
ಸ್ಥಳಕ್ಕೆ ಭೇಟಿ ನೀಡಿರುವ ಎಸ್‌ಪಿ ದಿವ್ಯಾ ಗೋಪಿನಾಥ್ ಪರಿಶೀಲನೆ ನಡೆಸುತ್ತಿದ್ದಾರೆ. 
 
ಸೋಮವಾರ- ಮಂಗಳವಾರದ ನಡುವಿನ ರಾತ್ರಿ 1.30 ರ ಸುಮಾರಿಗೆ ಕಚೇರಿಗೆ ಬಂದಿದ್ದ ರಾಘವೇಂದ್ರ ಆತ್ಮಹತ್ಯೆಗೆ ಶರಣಾಗಿದ್ದಾರೆ.  
 
ಘಟನೆಗೆ ಕಾರಣ ತಿಳಿದು ಬಂದಿಲ್ಲ. ನನ್ನ ಸಾವಿಗೆ ನಾನೇ ಕಾರಣ ಎಂದು ಅವರು ಡೆತ್ ನೋಟ್ ಬರೆದಿಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಕೌಟುಂಬಿಕ ಸಮಸ್ಯೆಯಿಂದ ಅವರು ಈ ನಿರ್ಧಾರಕ್ಕೆ ಬರಲು ಕಾರಣವಾಯಿತೋ ಅಥವಾ ಕೆಲಸದ ಒತ್ತಡಕ್ಕೆ ಹೀಗೆ ಮಾಡಿಕೊಂಡರೇ ಎಂಬುದು ತನಿಖೆಯ ಬಳಿಕವಷ್ಟೇ ಹೊರಬೀಳಲಿದೆ. 
 
ರಾಘವೇಂದ್ರ ಮೂಲತಃ ಕೋಲಾರದ ವೇಮಗಲ್‌ನವರಾಗಿದ್ದು 2003ನೇ ಬ್ಯಾಚ್ ಇನ್ಸಪೆಕ್ಟರ್ ಆಗಿದ್ದರು. ಅವರ ಮೂವರು ಹಿರಿಯ ಸಹೋದರರು ಸ್ಥಳಕ್ಕಾಗಮಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಾಲು ಸಾಲು ರಜೆ, ದುಪ್ಪಟ್ಟು ಟಿಕೆಟ್ ದರಕ್ಕೆ ಸುಸ್ತಾದ ಪ್ರಯಾಣಿಕರು

ಜೈಲಿನಲ್ಲಿ ಪ್ರೇಮ, ಸಪ್ತಪದಿ ತುಳಿಯಲು ಸಜ್ಜಾದ ಕೈದಿಗಳು, ಏನಿದು ಘಟನೆ

ಪೌರಾಯುಕ್ತೆಗೆ ಧಮ್ಕಿ ಹಾಕಿದ ಪ್ರಕರಣ, ರಾಜೀವ್ ಗೌಡಗೆ ಬಿಗ್ ಶಾಕ್‌

ಅವಧಿ ಮೀರಿದ ಮೆಡಿಸಿನ್ ನೀಡಿದ ವಿಚಾರ ವೈರಲ್ ಬೆನ್ನಲ್ಲೇ ಔಷಧ ವಿತರಕ ಆತ್ಮಹತ್ಯೆ

ಬೈಗುಳ ರೀಲ್ಸ್‌ನಿಂದ ಖ್ಯಾತಿ ಗಳಿಸಿದ್ದ ಆಶಾ ಪಂಡಿತ್ ಇನ್ನಿಲ್ಲ

ಮುಂದಿನ ಸುದ್ದಿ
Show comments