Publish Date: Fri, 01 Feb 2019 (14:31 IST)
Updated Date: Fri, 01 Feb 2019 (14:33 IST)
ರಾಜ್ಯ ಮಟ್ಟದ ಸರ್ಕಾರಿ ನೌಕರರ ಸಾಂಸ್ಕೃತಿಕ ಮತ್ತು ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದ ಶಿಕ್ಷಕಿಯರು ರಾಷ್ಟ್ರಮಟ್ಟದ ತ್ರೋಬಾಲ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಮೈಸೂರಿನಲ್ಲಿ ನಡೆದ ರಾಜ್ಯ ಮಟ್ಟದ ಸರ್ಕಾರಿ ನೌಕರರ ಸಾಂಸ್ಕೃತಿಕ ಮತ್ತು ಕ್ರೀಡಾಕೂಟದಲ್ಲಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಶಿಕ್ಷಕಿಯರು ಭಾಗವಹಿಸಿ ರಾಜ್ಯ ಮಟ್ಟದಿಂದ ತ್ರೋಬಾಲ್ ಸ್ಪರ್ಧೆಯಲ್ಲಿ ಗೆದ್ದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಶಿಕ್ಷಕಿಯರಾದ ಪರಿಮಳ, ಜಯಶೀಲಮ್ಮ, ಪ್ರಭಾ ಹೆಚ್.ಎಸ್., ಚಿಕ್ಕದೇವಮ್ಮ, ಸ್ಮಿತಾ, ರೇಖಾ, ಚೈತ್ರ, ಸುಕನ್ಯಾ, ಮಂಜುಳ, ಸುಮ ಅವರು ಭಾಗವಹಿಸಿ ವಿಜಯಶಾಲಿಯಾಗಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.