Select Your Language

Notifications

webdunia
webdunia
webdunia
webdunia

ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಚಿತ್ರದುರ್ಗ ಫಸ್ಟ್, ಯಾದಗಿರಿ ಲಾಸ್ಟ್..!

ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಚಿತ್ರದುರ್ಗ ಫಸ್ಟ್, ಯಾದಗಿರಿ ಲಾಸ್ಟ್..!
bangalore , ಸೋಮವಾರ, 8 ಮೇ 2023 (18:57 IST)
ವಿದ್ಯಾರ್ಥಿಗಳ ಜೀವನದ  ಪ್ರಮುಖ ಘಟ್ಟ ಎಂದರೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ. ಇಂದು ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಹೊರ ಬಿದ್ದಿದ್ದು, ಪರೀಕ್ಷೆ ಬರೆದು ರಿಸಲ್ಟ್‌ಗಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳು ಕೊನೆಗೂ ತಮ್ಮ ಫಲಿತಾಂಶವನ್ನು ಕಂಡು ಖುಷಿಪಟ್ಟಿದ್ದಾರೆ. ಈ ಬಾರಿ ಪರೀಕ್ಷೆಯಲ್ಲಿ ಯಾರು ಹೆಚ್ಚಿನ ಅಂಕ ಪಡೆದಿದ್ದಾರೆ.2022 -2023 ನೇ ಸಾಲಿನ SSLC ಫಲಿತಾಂಶ ಹೊರಬಿದ್ದಿದೆ. ಸುದ್ದಿಗೋಷ್ಟಿ ನಡೆಸಿ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಹಾಗು ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷ ರಾಮಚಂದ್ರನ್ ಫಲಿತಾಂಶ ಪ್ರಕಟಿಸಿದರು.  ಮಾರ್ಚ್ 31 ರಿಂದ ಏಪ್ರಿಲ್ 15ರವರೆಗೆ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಗೆ 835102 ವಿದ್ಯಾರ್ಥಿಗಳು ಹಾಜರಾಗಿದ್ದು ಅದರಲ್ಲಿ ಒಟ್ಟು 700619 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇಕಡಾ 83.89 ರಷ್ಟು ಫಲಿತಾಂಶ ಬಂದಿದೆ. 

ಇನ್ನು 425968 ಬಾಲಕರು ಪರೀಕ್ಷೆ ಬರೆದಿದ್ದು ಇದರಲ್ಲಿ 341108 ಬಾಲಕರು ತೇರ್ಗಡೆಯಾಗಿದ್ದು ಶೇಕಡವಾರು 80.08 ರಷ್ಟು ಬಾಲಕರು ತೇರ್ಗಡೆಯಾಗಿದ್ದಾರೆ. 409134 ಬಾಲಕಿಯರು ಪರೀಕ್ಷೆ ಬರೆದಿದ್ದು 359511 ವಿದ್ಯಾರ್ಥಿನಿಯರು ತೇರ್ಗಡೆಯಾಗಿದ್ದು, ಶೇಕಡವಾರು 87.87 ರಷ್ಟು ಫಲಿತಾಂಶ ಬಂದಿದೆ. ಪ್ರತಿ ವರ್ಷದಂತೆ ಈ ವರ್ಷವೂ ಬಾಲಕಿಯರದ್ದೇ ಮೇಲುಗೈ ಸಾಧಿಸಿದ್ದಾರೆ.

ಈ ಬಾರಿ ಚಿತ್ರದುರ್ಗ ಜಿಲ್ಲೆಯು ಶೇಕಡ 96. 80 ಶ್ರೇಣಿ ಪಡೆದುಕೊಂಡು ಪ್ರಥಮ ಸ್ಥಾನ ಪಡೆದುಕೊಂಡರೆ, ಶೇಕಡಾ 96.74ರಷ್ಟು ಮಂಡ್ಯ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಶೇಕಡಾ 96.68 ಹಾಸನ ತೃತೀಯ ಸ್ಥಾನ ಪಡೆದುಕೊಂಡರೆ ಶೇಕಡ 75.4 ರಷ್ಟು ಫಲಿತಾಂಶ ಪಡೆದುಕೊಂಡು ಯಾದಗಿರಿ ಕೊನೆ ಸ್ಥಾನ ಪಡೆದುಕೊಂಡಿದೆ. ನಗರ ಪ್ರದೇಶದಲ್ಲಿ 351392 ವಿದ್ಯಾರ್ಥಿಗಳಲ್ಲಿ 279773 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ.79.62 ರ ಫಲಿತಾಂಶ ಪಡೆದರೆ ಗ್ರಾಮೀಣ ಭಾಗದಲ್ಲಿ 483710 ವಿದ್ಯಾರ್ಥಿಗಳಲ್ಲಿ 420846 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.87 ರಷ್ಟು ಫಲಿತಾಂಶ ಪಡೆದಿದ್ದಾರೆ,ಈ ಬಾರಿಯೂ ಗ್ರಾಮೀಣ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸಿದ್ದಾರೆ ಎಂದರು.

ಈ ಬಾರಿ ಶೇಕಡ ನೂರಕ್ಕೆ ನೂರು ಅಂಕಗಳನ್ನು ನಾಲ್ಕು ವಿದ್ಯಾರ್ಥಿಗಳು ಪಡೆದುಕೊಂಡಿದ್ದು, ಬೆಂಗಳೂರಿನ ನ್ಯೂ ಮೆಕಾಲೆ ಇಂಗ್ಲೀಷ್ ಹೈ ಸ್ಕೂಲ್ ವಿದ್ಯಾರ್ಥಿನಿ ಭೂಮಿಕ ಪೈ, ಚಿಕ್ಕಬಳ್ಳಾಪುರದ ಬಾಲಗಂಗಾಧರನಾಥ ಹೈಸ್ಕೂಲ್‌ನ ಯಶಸ್ ಗೌಡ, ಸವದತ್ತಿಯ ಕುಮಾರೇಶ್ವರ ಶಾಲೆಯ ಅನುಪನಾ ಶ್ರೀಶೈಲ ಹಿರೇಹೋಳಿ ಹಾಗೂ ಮುದ್ದೇಬಿಹಾಳದ  ಆಕ್ಸ್ ಫರ್ಡ್ ಇಂಗ್ಲೀಷ್ ಶಾಲೆಯ ಭೀಮನಗೌಡ ಹನುಮಂತಗೌಡ ಪಾಟೀಲ್ 625 ಕ್ಕೆ625 ಅಂಕ ಪಡೆದುಕೊಂಡು ಸಂತಸದ ನಗೆ ಬೀರಿದ್ದಾರೆ.

ಫಲಿತಾಂಶದಲ್ಲಿ ಗೊಂದಲವಿರುವ ವಿದ್ಯಾರ್ಥಿಗಳು ಛಾಯಾ ಪ್ರತಿ ಪಡೆಯಲು  08-05-23 ರಿಂದ 14-05-2023 ರವರೆಗೆ  ಅವಕಾಶ ನೀಡಿದ್ದು 15-05-23 ರಿಂದ 21-05-2023ವರೆಗೆ ಮರುಎಣಿಕೆ ನಡೆಯಲಿದೆ ಹಾಗೂ ಪೂರಕ ಪರೀಕ್ಷೆಯ ನೋಂದಣಿಯು 08-05-23 ರಿಂದ 15-05-23 ವರೆಗೆ ನಡೆಯಲಿದ್ದು ವಿದ್ಯಾರ್ಥಿಗಳು ಆದಷ್ಟು ಬೇಗ ಪೂರಕ ಪರೀಕ್ಷೆಗೆ ನೊಂದಣಿ ಮಾಡಿ ಕೊಳ್ಳಬೇಕಾಗಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರು ರವರಿಂದ ಮತ ಎಣಿಕೆ ಕೇಂದ್ರಗಳ ವೀಕ್ಷಣೆ