Select Your Language

Notifications

webdunia
webdunia
webdunia
webdunia

ರೈತರ ಜಮೀನಿನಲ್ಲಿ ವಕ್ಫ್ ಮೊಹರು: ಉಳುಮೆ ಮಾಡಲು ಹೊರಟ ರೈತರಿಗೆ ಲಾಠಿ ಏಟು

Waqf Board

Krishnaveni K

ಚಿಕ್ಕಬಳ್ಳಾಪುರ , ಶುಕ್ರವಾರ, 15 ನವೆಂಬರ್ 2024 (14:13 IST)
ಚಿಕ್ಕಬಳ್ಳಾಪುರ: ಯಾವುದೇ ಕಾರಣಕ್ಕೂ ರೈತರ ಜಮೀನನ್ನು ವಕ್ಫ್ ಹೋಗಲು ಬಿಡಲ್ಲ ಎಂದು ಖುದ್ದು ಸಿಎಂ ಸಿದ್ದರಾಮಯ್ಯನವರೇ ಒಂದು ಕಡೆ ಹೇಳುತ್ತಿದ್ದರೆ ಇತ್ತ ಸದ್ದಿಲ್ಲದೇ  ವಕ್ಫ್ ಹೆಸರಿನಲ್ಲಿ ರೈತರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ.

ಚಿಂತಾಮಣಿ ತಾಲೂಕಿನ ತಿಮ್ಮಸಂದ್ರ ತಾಲೂಕಿನ ರೈತರ ಜಮೀನಿನ ಪಹಣಿಯಲ್ಲಿ ವಕ್ಫ್ ಎಂದು ನಮೂದಾಗಿದ್ದು, ಉಳುಮೆ ಮಾಡಲು ಹೋದ ರೈತರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. ತಮ್ಮ ಜಮೀನಿನಲ್ಲಿ ವಕ್ಫ್ ಹೆಸರು ನಮೂದಾಗಿರುವುದರ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದು ಪ್ರತಿಭಟನೆ ನಡೆಸಿದ್ದಾರೆ.

ಉಳುಮೆ ಮಾಡಲು ಮುಂದಾದ ರೈತರ ಮೇಲೆ ಲಾಠಿ ಪ್ರಹಾರ ನಡೆಸಿದ ಪೊಲೀಸರು ಅವರ ಟ್ರ್ಯಾಕ್ಟರ್ ಗಳನ್ನು ವಶಪಡಿಸಿಕೊಂಡು ಕೇಸ್ ದಾಖಲಿಸಿದ್ದಾರೆ.ತಿಮ್ಮಸಂದ್ರ ಗ್ರಾಮದ 10 ಕ್ಕೂ ಹೆಚ್ಚು ರೈತರ ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದೆ. ಇದರಿಂದ ಆಕ್ರೋಶಗೊಂಡ ರೈತರು ಪೊಲೀಸರು, ಅಧಿಕಾರಿಗಳು ಮತ್ತು ಜಮೀಯಾ ಮಸೀದಿ ಸದಸ್ಯರ ಜೊತೆ ವಾಗ್ವಾದ ನಡೆಸಿದ್ದಾರೆ.

ಜಾಮಿಯಾ ಮಸೀದಿಯ ಸದಸ್ಯರು ರೈತರ ವಿರುದ್ಧ ದೂರು ನೀಡಿದ್ದಾರೆ. ಈ ಸಂಬಂಧ ರೈತರ ಮೇಲೆ ಪೊಲೀಸರು ಭಾರತೀಯ ದಂಡ ಸಂಹಿತೆ ಕಾನೂನು ಸೆಕ್ಷನ್ 324(4), 329(3) ರ ಅಡಿಯಲ್ಲಿ ಕೇಸ್ ದಾಖಲಿಸಿದ್ದಾರೆ. ವಿವಾದಿತ ಸ್ಥಳದಲ್ಲಿ ಉಳುಮೆ ಮಾಡಲು ಹೊರಟಿದ್ದಕ್ಕೆ ಕೇಸ್ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಬಫೂನ್ ಥರಾ ಹೇಳಿಕೆ ಕೊಡಬಾರದು: ಬಿಜೆಪಿ 50 ಕೋಟಿ ಆಮಿಷಕ್ಕೆ ಕುಮಾರಸ್ವಾಮಿ ಟಾಂಗ್