Webdunia - Bharat's app for daily news and videos

Install App

Bengaluru Stampede: ಇದೊಂದು ಕೆಲಸ ಮಾಡಿದ್ರೆ ಚಿನ್ನಸ್ವಾಮಿಯಲ್ಲಿ ದುರಂತವಾಗ್ತಾನೇ ಇರಲಿಲ್ಲ

Krishnaveni K
ಶುಕ್ರವಾರ, 6 ಜೂನ್ 2025 (13:41 IST)
ಬೆಂಗಳೂರು: ಚಿನ್ನಸ್ವಾಮಿ ಮೈದಾನದಲ್ಲಿ ಆರ್ ಸಿಬಿ ಸಂಭ್ರಮಾಚರಣೆ ವೇಳೆ ನಡೆದ ಕಾಲ್ತುಳಿತದಲ್ಲಿ 11 ಜನರ ಸಾವಾಗಿತ್ತು. ಇದೊಂದು ಕೆಲಸ ಮಾಡಿದ್ರೆ ಅಂದು ದುರಂತವೇ ನಡೆಯುತ್ತಿರಲಿಲ್ಲ.

ಚಿನ್ನಸ್ವಾಮಿಯಲ್ಲಿ ಅಷ್ಟೊಂದು ಜನ ಸೇರಲು ಮತ್ತು ನೂಕು ನುಗ್ಗಲಾಗಲು ಒಂದೇ ಒಂದು ಕಾರಣ ಉಚಿತ ಆಫರ್. ಸಾಮಾನ್ಯವಾಗಿ ಚಿನ್ನಸ್ವಾಮಿ ಮೈದಾನಕ್ಕೆ ಪಂದ್ಯಗಳನ್ನು ನೋಡಲು ಒಂದೋ ಟಿಕೆಟ್ ಸಿಗಲ್ಲ, ಸಿಕ್ಕರೆ ಬಲು ದುಬಾರಿಯಾಗಿರುತ್ತದೆ.

ಆದರೆ ಈಗ ಉಚಿತವಾಗಿ ಕೊಹ್ಲಿ ಮತ್ತು ಆರ್ ಸಿಬಿ ಆಟಗಾರರನ್ನು ಕಣ್ತುಂಬಿಕೊಳ್ಳಬಹುದು ಎಂಬ ಒಂದೇ ಉದ್ದೇಶಕ್ಕೆ ಜನ ಸಾಗರದಂತೆ ಬಂದರು. ಒಂದು ವೇಳೆ ಟಿಕೆಟ್ ದರ ಕನಿಷ್ಠ 300 ರೂ.ಗಳನ್ನಾದರೂ ಫಿಕ್ಸ್ ಮಾಡಿದ್ದರೆ ಅರ್ಧಕ್ಕರ್ಧ ಜನ ಕಡಿಮೆಯಾಗುತ್ತಿದ್ದರು. ಈ ಹಣವನ್ನು ಸೈನಿಕರ ನಿಧಿಗೋ, ಇನ್ಯಾವುದೋ ಒಳ್ಳೆಯ ಕೆಲಸಕ್ಕೆ ಬಳಸಿಕೊಂಡಿದ್ದರೂ ಸಾಕಿತ್ತು.

ಆದರೆ ಟಿಕೆಟ್ ದರವಿದೆ ಎಂದು ಗೊತ್ತಾಗಿದ್ದರೆ ಇಷ್ಟೊಂದು ಜನ ಸೇರುತ್ತಿರಲಿಲ್ಲ. ಇದೊಂದು ಕೆಲಸ ಮಾಡಿದ್ದರೆ ಈ ದುರಂತವೇ ಸಂಭವಿಸುತ್ತಿರಲಿಲ್ಲವೇನೋ. ಆದರೆ ಈಗ ದುರಂತವಾಗಿ ಹೋಗಿದೆ. ಇದು ಎಂದೆಂದಿಗೂ ಆರ್ ಸಿಬಿ ಗೆಲುವಿನ ಜೊತೆಗೆ ಕಪ್ಪು ಚುಕ್ಕೆಯಾಗಿ ಉಳಿಯಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಾಲ್ವಡಿ ಕೃಷ್ಣರಾಜ ಒಡೆಯರ್ ನಾಡಿಗೆ ನೀಡಿದ ಕೊಡುಗೆಗಳ ಪಟ್ಟಿ ಇಲ್ಲಿದೆ ನೋಡಿ

ನಾಲ್ವಡಿ ಒಡೆಯರ್ ಗಿಂತ ನೀವು ಗ್ರೇಟ್ ಅಂತೆ ಎಂದು ಕೇಳಿದ್ದಕ್ಕೆ ಸಿದ್ದರಾಮಯ್ಯ ಉತ್ತರ ನೋಡಿ

ಸಿದ್ದರಾಮಯ್ಯ ಒಡೆಯರ್ ಗಿಂತ ಗ್ರೇಟ್ ಎಂದಿದ್ದ ಯತೀಂದ್ರ: ಯದುವೀರ್ ಒಡೆಯರ್ ಉತ್ತರ ನೋಡಿ

ರಸಗೊಬ್ಬರ ರೈತರಿಗೆ ಸಿಗಲು ಸರ್ಕಾರ ವ್ಯವಸ್ಥೆಯೇ ಮಾಡಿಲ್ಲ: ಬಿವೈ ವಿಜಯೇಂದ್ರ

Arecanut price: ಇಂದು ಅಡಿಕೆ ರೇಟ್ ಎಷ್ಟು ನೋಡಿ

ಮುಂದಿನ ಸುದ್ದಿ
Show comments