Chinnaswamy: ಹರಿದ ಬಟ್ಟೆ, ಕೈಯಿಂದ ಎದೆ ಮುಚ್ಚಿಕೊಂಡಿದ್ದ ಯುವತಿ: ಚಿನ್ನಸ್ವಾಮಿಯಲ್ಲಿ ನಡೆದ ಶಾಕಿಂಗ್ ಘಟನೆಯಿದು

Krishnaveni K
ಗುರುವಾರ, 5 ಜೂನ್ 2025 (21:40 IST)
ಬೆಂಗಳೂರು: ಆರ್ ಸಿಬಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲು ಜನಸಾಗರ ಬಂದಿದ್ದಾಗ ನಡೆದ ಕಾಲ್ತುಳಿತದಲ್ಲಿ ಕೆಲವು ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯವಾಗಿತ್ತು ಎಂದು ವರದಿಯಾಗಿದೆ. ಇದೀಗ ಅಲ್ಲಿ ಆ ದೃಶ್ಯವನ್ನು ಕಣ್ಣಾರೆ ಕಂಡ ವ್ಯಕ್ತಿಯೊಬ್ಬರು ಅದನ್ನು ವಿವರಿಸಿದ್ದಾರೆ.

ಅಭಿಮಾನಿಯೊಬ್ಬರು ನಿನ್ನೆ ನಡೆದ ಘಟನೆ ಬಗ್ಗೆ ವಿವರಿಸಿದ್ದು, ಅವರ ಅನುಭವ ಕೇಳಿದರೆ ನಿಜಕ್ಕೂ ನಾವು ನಾಗರಿಕ ಸಮಾಜದಲ್ಲಿದ್ದೇವೆಯೇ ಎಂದು ನಮಗೇ ನಾಚಿಕೆಯಾಗುತ್ತದೆ. ಒಬ್ಬ ಹೆಣ್ಣು ಮಗಳಿಗಾದ ಪರಿಸ್ಥಿತಿ ಬಗ್ಗೆ ಅವರು ವಿವರಿಸಿರುವುದನ್ನು ಜಸ್ಟ್ ಬೆಂಗಳೂರು ಎಂಬ ಇನ್ ಸ್ಟಾಗ್ರಾಂ ಖಾತೆದಾರರು ವಿವರಿಸಿದ್ದಾರೆ.

ಅಭಿಮಾನಿ ಘಟನೆ ಬಗ್ಗೆ ಹೇಳಿದ್ದು ಹೀಗೆ. ‘ನಾನು ಗೇಟ್ ನಂ.7 ರಲ್ಲಿದ್ದೆ. ನನ್ನ ಎದುರು ಭಾರೀ ಜನಸಮೂಹವೇ ಇತ್ತು. ಕೆಲವರಲ್ಲಿ ಪಾಸ್ ಕೂಡಾ ಇತ್ತು. ಟಿಕೆಟ್ ಕೂಡಾ ಇರದ ದೊಡ್ಡ ಸಮೂಹ ಮುಖ್ಯದ್ವಾರದ ಗೇಟ್ ಮುರಿಯಲು ಯತ್ನಿಸಿದರು. ಮುಂದೆ ತಾಳ್ಮೆಯಿಂದ ಕಾಯುತ್ತಿದ್ದವರು ಇದ್ದಕ್ಕಿದ್ದಂತೆ ಮುಗ್ಗರಿಸಿದರು. ಮಹಿಳೆಯರು, ಮಕ್ಕಳು ಸೇರಿದಂತೆ ಅಲ್ಲಿದ್ದವರೆಲ್ಲರೂ ಗಾಬರಿಯಿಂದ ಒಬ್ಬರ ಮೇಲೊಬ್ಬರು ಬಿದ್ದರು.

ಒಬ್ಬ ಯುವತಿ ಕ್ರಾಪ್ ಟಾಪ್ ಹಾಕಿಕೊಂಡಿದ್ದಳು. ಅವಳ ಬಟ್ಟೆ ಹರಿದು ಹೋಗಿತ್ತು. ಎದೆಭಾಗವನ್ನು ಅವಳು ಅಕ್ಷರಶಃ ಕೈಯಿಂದ ಮುಚ್ಚಿ ಮಾನ ಕಾಪಾಡಲು ಯತ್ನಿಸುತ್ತಿದ್ದಳು. ಇಂಥಾ ಪರಿಸ್ಥಿತಿ ಕಣ್ಣಾರೆ ಕಂಡು ನನಗೆ ಅರಗಿಸಿಕೊಳ್ಳಲೂ ಸಾಧ್ಯವಾಗಲಿಲ್ಲ. ಅದೃಷ್ಟವಶಾತ್ ಯಾರೋ ನನ್ನನ್ನು ಎಳೆದು ಹೊರಗೆ ಹಾಕಿದರು. ನಾನು ಅಲ್ಲಿಂದ ಸುರಕ್ಷಿತವಾಗಿ ಬಂದೆ’ ಎಂದಿದ್ದಾರೆ. ಅವರ ಈ ಮಾತುಗಳು ಎಂಥಹವರನ್ನೂಅರೆಕ್ಷಣ ಶಾಕ್ ಆಗಿಸುವಂತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿದ್ದರಾಮಯ್ಯ ಸಂಕಲ್ಪನೂ ಈಡೇರುತ್ತೆ, ಡಿಕೆಶಿ ಸಿಎಂ ಆಗುತ್ತಾರೆ: ಜನಾರ್ದನ ರೆಡ್ಡಿ

ಇದಕ್ಕೆಲ್ಲ ಖರ್ಗೆ, ರಾಹುಲ್ ಗಾಂಧಿ ಪರಿಹಾರ ಹುಡುಕುತ್ತಾರೆ: ಕೆ ಹರಿಪ್ರಸಾದ್

ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು: ಜಗದೀಶ್ ಶೆಟ್ಟರೆ ಆಗ್ರಹ

BB Season 12, ಧ್ರುವಂತ್ ಮಾತಿಂದ್ದ ರೊಚ್ಚಿಗೆದ್ದ ಸೂರಜ್, ಧನುಷ್, ಸ್ಪಂದನಾ

ಸಿದ್ದರಾಮಯ್ಯ ಕಾಂಗ್ರೆಸ್ಸಿಗನೂ ಅಲ್ಲ, ಜೆಡಿಎಸ್ ಅಲ್ಲ, ಅಹಿಂದ ನಾಯಕನೂ ಅಲ್ಲ: ಎಚ್ ವಿಶ್ವನಾಥ್

ಮುಂದಿನ ಸುದ್ದಿ
Show comments