Publish Date: Wed, 31 Jan 2018 (12:09 IST)
Updated Date: Wed, 31 Jan 2018 (12:18 IST)
ರಾಮನಗರ: ಪೋಷಕರ ಯಡವಟ್ಟಿನಿಂದ ಸೆರಲ್ಯಾಕ್ ತಿಂದ ಮೂರು ತಿಂಗಳ ಮಗುವೊಂದು ಮೃತಪಟ್ಟ ದಾರುಣ ಘಟನೆಯೊಂದು ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಹೊಸಪಾಳ್ಯದ ಲ್ಲಿ ನಡೆದಿದೆ.
ಮಂಜುನಾಥ್, ಧನಲಕ್ಷ್ಮಿ ದಂಪತಿಯ ಮೂರು ತಿಂಗಳ ಮಗುವಿಗೆ ಸೆರಲ್ಯಾಕ್ ತಿನ್ನಿಸಿದ ಕಾರಣ ಅದು ಗಂಟಲಿನಲ್ಲಿ ಸಿಕ್ಕಿ ಹಾಕಿಕೊಂಡು ಉಸಿರಾಟದ ಸಮಸ್ಯೆ ಕಾಣಿಸಿಕೊಂಡು ಮಗು ಸಾವನ್ನಪ್ಪಿದೆ. ತಕ್ಷಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರೂ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದ ಕಾರಣ ಮಗು ಮೃತಪಟ್ಟಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ