Publish Date: Fri, 07 Jul 2017 (16:48 IST)
Updated Date: Fri, 07 Jul 2017 (16:52 IST)
ರೈತನಿಂದ ಲಂಚ ಪಡೆದಿದ್ದ ಸರ್ಕಾರಿ ಅಧಿಕಾರಿಯಿಂದ ರೈತರು ಲಂಚದ ಹಣ ಕಕ್ಕಿಸಿರುವ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಕಬ್ಬೂರು ಗ್ರಾಮದಲ್ಲಿ ನಡೆದಿದೆ.
ಮಳೆ ಇಲ್ಲದೆ, ಬೆಳೆ ಇಲ್ಲದೆ ರೈತರ ಸಂಕಷ್ಟದಲ್ಲಿದ್ದರೆ ಹೆಸ್ಕಾ ಸೆಕ್ಷನ್ ಆಫೀಸರ್ ರಾಜು ಗಬ್ಬೂರು ಎಂಬಾತ ಟ್ರಾನ್ಸ್`ಫಾರ್ಮರ್ ಬದಲಾವಣೆಗೆ ರೈತನೊಬ್ಬನಿಂದ 6000 ರೂ. ಲಂಚ ಪಡೆದಿದ್ದ. ಅಧಿಕಾರಿಯ ಲಂಚಾವತಾರ ಕಂಡು ರೋಸಿಹೋಗಿದ್ದ ರೈತರು ಲಂಚಾವತಾರ ವಿಡಿಯೋ ಮಾಡಿದ್ದರು.
ಇದೀಗ, ಪೊಲೀಸರ ಸಮ್ಮುಖದಲ್ಲಿ ವಿಡಿಯೋ ಬಹಿರಂಗಪಡಿಸಿ ತಪ್ಪೊಪ್ಪಿಕೊಳ್ಳುವಂತೆ ಮಾಡಿದ್ದಾರೆ. ಲಂಚ ಪಡೆದ ಬಗ್ಗೆ ತಪ್ಪೊಪ್ಪಿಕೊಂಡ ಅಧಿಕಾರಿ. ಲಂಚದ ಹಣವನ್ನ ವಾಪಸ್ ರೈತನಿಗೆ ನೀಡಿದ್ದಾನೆ. ಇನ್ಮುಂದೆ ಲಂಚ ಪಡೆಯುವವರ ವಿರುದ್ಧ ಮುಗಿಬೀಳಲು ನಿರ್ಧರಿಸುವ ರೈತರು ಲಂಚ ಕೇಳುವ ಅಧಿಕಾರಿಗಳಿಗೆ ಬದ್ಧಿ ಕಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ