ಕೆಮಿಕಲ್ ಹೆಂಡದ ಹಿಂದೆ ಬಿದ್ದು ಇಡೀ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಸಣ್ಣಗೆ ದುಶ್ಚಟಕ್ಕೆ ದಾಸ ವಯಸ್ಸಾಗಿ ಇಹಲೋಕ ತ್ಯಜಿಸಿದ್ದಾರೆ. ಇದ್ರಿಂದ ಸದ್ಯ ಇಡೀ ಜಿಲ್ಲೆ ಸಂಕಟ ಅನುಭವಿಸುತ್ತಿದೆ, ಸಿಹೆಚ್ ಪೌಡರ್ ಹಾವಳಿಗೆ ಕಂಗಾಲಾಗಿ ಹೋಗಿದ್ದಾರೆ.
ಬಿಸಿಲನಾಡು ರಾಯಚೂರು ಜಿಲ್ಲೆ ಕೇವಲ ಬಿಸಿಲಿಗಷ್ಟೇ ಹೆಸರಾಗಿಲ್ಲ. ಇದೀಗ ಅಕ್ರಮ ಚಟುವಟಿಕೆಗಳ ಆಗರವಾಗ್ತಿದೆ. ಆಂಧ್ರಪ್ರದೇಶದ ಹಾಗೂ ತೆಲಂಗಾಣ ಗಡಿ ಭಾಗವಾಗಿರೋದ್ರಿಂದ ಇಲ್ಲಿ ಅಕ್ರಮ ಚಟುವಟಿಕೆಗಳು ಎಗ್ಗಿಲ್ಲದೆ ನಡೆಯುತ್ತಿವೆ.ರಾಯಚೂರು ಗಡಿಯಲ್ಲಿ ಅಕ್ರಮ ಎಸ್‌ಎಚ್ ಪೌಡರ್ ಸೇಂದಿ ದಂಧೆ ಬಡವರ ಪ್ರಾಣ ಹಿಂಡುತ್ತಿದೆಪ್ರಮುಖವಾಗಿ ರಾಯಚೂರು ತಾಲೂಕಿನ ಆಂಧ್ರ ಹಾಗೂ ತೆಲಂಗಾಣ ಭಾಗಗಳಲ್ಲಿ ಯಥೇಚ್ಛವಾಗಿ ಸಿ.ಹೆಚ್.ಪೌಡರ್ ಮಾರಾಟ ನಡೆಯುತ್ತಿದೆ. ಕಡಿಮೆ ಬೆಲೆಗೆ ಸಿಗುವ ಕ್ಲೋರಲ್ ಹೈಡ್ರೇಟ್ ರಾಸಾಯನಿಕ ಬಳಸಿದ ಹೆಂಡ ಕುಡಿದ ಜನರು ನರ ದೌರ್ಬಲ್ಯ ಮತ್ತು ಅಂಗಾಂಗ ವೈಫಲ್ಯದಿಂದ ಕಡಿಮೆ ವಯಸ್ಸಿಗೆ ಸಾಯುತ್ತಾರೆ.