ವರಮಹಾಲಕ್ಷ್ಮೀ ಹಬ್ಬ ಬಂದ್ರೆ ಸಿಲಿಕಾನ್ ಸಿಟಿ ಜನತೆ ಸಂಪೂರ್ಣ ಆಚರಣೆಯಲ್ಲಿ ತೊಡಗಿರ್ತಾರೆ.ಇನ್ನು ವರಮಹಾಲಕ್ಷ್ಮೀ ಹಬ್ಬ ಅಂದ್ರೆ ಸ್ವಲ್ಪ ಜಾಸ್ತಿಯೇ ಸಂಭ್ರಮ ಇರುತ್ತೆ.ಇವತ್ತು ಅಂತೂ ಹೊಸ ಹೊಸ ಉಡುಗೆ ತೊಟ್ಟು ಕೆಲವರು ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದ್ರೆ ಇನ್ನು ಕೆಲವರು ಮನೆಯಲ್ಲೆ ಲಕ್ಷ್ಮೀ ಆರಾಧಿಸಿದ್ರು. ಇನ್ನು ಮುಜರಾಯಿ ಇಲಾಖೆ ಸೂಚನೆ ಮೇರೆಗೆ ಎಲ್ಲ ಮಹಿಳೆಯರಿಗೆ ದೇವಸ್ಥಾನದಲ್ಲಿ ಅರಿಶಿನ ಕುಂಕುಮ ವನ್ನು ವಿತರಣೆ ಮಾಡಲಾಯಿತು. ಇದನ್ನ ಎಲ್ಲ ಮಹಿಯರು ಸ್ವೀಕರಿಸಿದ್ರು. ಶೇಷಾದ್ರಿಪುರಂನ ಮಹಾಲಕ್ಷ್ಮೀ ಮಂದಿರದಲ್ಲಿ ವಿಶೇಷ ಅಲಂಕಾರ ಮಾಡಿ ಅದ್ದೂರಿಯಿಂದ ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸಲಾಯ್ತು.ಜೋಳ ಮತ್ತು ಅಲಂಕಾರಿಕ ಹೂವುಗಳಿಂದ ದೇವಾಲಯವನ್ನು ವಿಭಿನ್ನವಾಗಿ ಸಿಂಗರಿಸಿದ್ರು.
ಸಿಲಿಕಾನ್ ಸಿಟಿಯಲ್ಲಿ ಹಬ್ಬದ ಸಂಭ್ರಮವೇ ಬೇರೆ. ನಗರದ ಪ್ರಮುಖ ಲಕ್ಷ್ಮೀ ದೇವಾಲಯಗಳಲ್ಲಿ ಇವತ್ತು ವರಮಹಾಲಕ್ಷ್ಮೀ ಹಬ್ಬವನ್ನ ಸಂಭ್ರಮದಿಂದ ಆಚರಿಸಲಾಯ್ತು. ಮಹಾಲಕ್ಷ್ಮೀ ದೇವಾಲಯದಲ್ಲಿ ಮಹಾಲಕ್ಷ್ಮೀ ವ್ರತ ಜೊತೆಗೆ, ಅಭಿಷೇಕ, ವಿಷೇಶ ಪೂಜೆಯನ್ನ ಸಲ್ಲಿಸಲಾಯ್ತು. ವರಮಹಾಲಕ್ಷ್ಮಿ ಹಿನ್ನೆಲೆ ಎಲ್ಲ ದೇವಿ, ದೇವಾಲಯಗಳು ಫುಲ್ ರಶ್ ಆಗಿದ್ದವು.