Select Your Language

Notifications

webdunia
webdunia
webdunia
webdunia

ಸಿಸಿಬಿ ಕೈ ಯಲ್ಲಿ ಜಮೀನು ವ್ಯಾಜ್ಯ

ಸಿಸಿಬಿ ಕೈ ಯಲ್ಲಿ ಜಮೀನು ವ್ಯಾಜ್ಯ
bangalore , ಭಾನುವಾರ, 18 ಜುಲೈ 2021 (19:19 IST)
ಜಮೀನು ವ್ಯಾಜ್ಯ ಸರಿಪಡಿಸುವುದಾಗಿ ಸಿಸಿಬಿ ಇನ್‍ಸ್ಪೆಕ್ಟರ್‍ಸೋಗಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯಿಂದ 10 ಲಕ್ಷ ರೂ. ಪಡೆದು ವಂಚಿಸಿದ ಆರೋಪಿಯನ್ನು ಜಯನಗರ ಪೆÇಲೀಸರು ಬಂಧಿಸಿದ್ದಾರೆ.
ವಂಚನೆಗೊಳಗಾದ ಜೆಪಿ ನಗರದ ನಾರಾಯಣ್ (88) ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಜಯನಗರ ಪೆÇಲೀಸರು ಜಯನಗರದ ನಿವಾಸಿ ವೆಂಕಟೇಶ್ ಎಂಬ ಆರೋಪಿಯನ್ನು ಬಂಧಿಸಿದ್ದಾರೆ. 
ದೂರುದಾರ ನಾರಾಯಣ್ ನಗರದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದರು. ತಾವರೆಕೆರೆ ಹೋಬಳಿ ನರಸಿಂಹಪುರ ಗ್ರಾಮದಲ್ಲಿ 11 ಎಕರೆ 20 ಗುಂಟೆ ಜಮೀನನ್ನು 2015ರಲ್ಲಿ ಕಂಚನಮಾಲ ಎಂಬುವವರಿಂದ ಖರೀದಿಸಿದ್ದರು. ಈ ಆಸ್ತಿಯ ವಿಚಾರವಾಗಿ ನಾರಾಯಣ್ ಹಾಗೂ ಖಾಸಗಿ ಕಂಪನಿಯೊಂದರ ನಡುವೆ ಜಮೀನು ವ್ಯಾಜ್ಯ ಇತ್ತು. 2017 ಆ.1ರಂದು ಅಪರಿಚಿತ ವ್ಯಕ್ತಿಯೊಬ್ಬ ನಾರಾಯಣ್ ಅವರನ್ನು ಸಂಪರ್ಕಿಸಿ ಜಯನಗರದ ಹೋಟೆಲ್‍ವೊಂದಕ್ಕೆ ಕರೆಯಿಸಿ ತಮ್ಮನ್ನು ಸಿಸಿಬಿ ಇನ್‍ಸ್ಪೆಕ್ಟರ್ ಶ್ರೀನಿವಾಸ್ ಎಂದು ಪರಿಚಯಿಸಿಕೊಂಡಿದ್ದ. ನೀವು ಖರೀದಿಸಿರುವ ಜಮೀನಿನ ವಿಚಾರವಾಗಿ ವಿಚಾರಣೆ ಮಾಡುತ್ತಿದ್ದು, ಮೋಸದಿಂದ ಆಸ್ತಿಯನ್ನು ಖರೀದಿಸಿದ್ದೀರಿ ಎಂದು ಬೆದರಿಸಿ ಪೆÇಲೀಸರು ಬಳಸುವ ಕೋಳವನ್ನು ತೋರಿಸಿದ್ದ. 15 ಲಕ್ಷ ರೂ. ಲಂಚ ಕೊಡದಿದ್ದರೆ ಬಂಧಿಸುವುದಾಗಿ ಹೇಳಿದ್ದ. ಇದರಿಂದ ಆತಂಕಗೊಂಡ ನಾರಾಯಣ್ ಸ್ಥಳದಲ್ಲೇ 50 ಸಾವಿರ ರೂ. ಕೊಟ್ಟು 10 ಲಕ್ಷ ರೂ.ಗೆ ಡೀಲ್ ಕುದುರಿಸಿದ್ದರು ಎಂದು ತಿಳಿದುಬಂದಿದೆ.
 
ಆರೋಪಿ ಬಣ್ಣ ಬಯಲು:
ಹಂತ-ಹಂತವಾಗಿ ಶ್ರೀನಿವಾಸ್ ಸೂಚಿಸಿದ ಬ್ಯಾಂಕ್ ಖಾತೆಗೆ ನಾರಾಯಣ್ ಆರ್‍ಟಿಜಿಎಸ್ ಮೂಲಕ 10 ಲಕ್ಷ ರೂ. ಕಳುಹಿಸಿದ್ದರು. ಬ್ಯಾಂಕ್ ಖಾತೆಗೆ ಹಣ ಜಮೆಯಾಗುತ್ತಿದ್ದಂತೆ ಕೇಸ್ ಕ್ಲೋಸ್ ಮಾಡುವುದಾಗಿ ಆರೋಪಿ ಹೇಳಿದ್ದ. ಇತ್ತೀಚೆಗೆ ನಾರಾಯಣ್ ಸಿಸಿಬಿ ಕಚೇರಿಗೆ ಹೋಗಿ ಇನ್‍ಸ್ಪೆಕ್ಟರ್ ಶ್ರೀನಿವಾಸ್ ಬಗ್ಗೆ ವಿಚಾರಿಸಿದಾಗ ನೀವು ಹೇಳಿದ ವ್ಯಕ್ತಿ ಇಲ್ಲಿ ಯಾರೂ ಇಲ್ಲ ಎಂದು ಹೇಳಿದ್ದರು. ಅನುಮಾನಗೊಂಡ ನಾರಾಯಣ್ ತಾವು ಹಣ ಕೊಟ್ಟ ವ್ಯಕ್ತಿಯ ಬ್ಯಾಂಕ್ ಖಾತೆ ಪರಿಶೀಲಿಸಿದಾಗ ಆತನ ಹೆಸರು ವೆಂಕಟೇಶ್ ಎಂಬುದು ಗೊತ್ತಾಗಿದೆ. ಇದಾದ ಬಳಿಕ ತಾವು ಮೋಸ ಹೋಗಿರುವುದನ್ನು ಅರಿತ ನಾರಾಯಣ್ ಈ ಬಗ್ಗೆ ಜಯನಗರ ಪೆÇಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ 1708 ಮಂದಿಗೆ ಸೋಂಕು ಪತ್ತೆ; 36 ಸಾವು