ಬೆಂಗಳೂರು-ನಗರದಲ್ಲಿ ಫೆ.27ರಂದು ಕುಡಿಯುವ ಕಾವೇರಿ ನೀರಿನ ಪೂರೈಕೆ ಸ್ಥಗಿತವಾಗಲಿದೆ.ಬೆಂಗಳೂರು ಜಲಮಂಡಳಿಯು ತುರ್ತು ನಿರ್ವಹಣಾ ಕಾಮಗಾರಿಗಳು ಮತ್ತು ಯು.ಎಫ್.ಡಬ್ಲ್ಯೂ ಬಲ್ಕ್ ಪ್ಲೋ ಮೀಟರ್ ಅಳವಡಿಕೆ ಕಾಮಗಾರಿ ಕೈಗೆತ್ತಿಕೊಳ್ಳುವ ಸಲುವಾಗಿ ದಿನಾಂಕ ಫೆ.27ರಿಂದ ಫೆ.28 ಬೆಳಗ್ಗೆ 6 ಗಂಟೆಯವರೆಗೂ ಕಾವೇರಿ ನೀರು ಸ್ಥಗಿತವಾಗಲಿದೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ನೀರಿನ ಬಲ್ಕ್ ಫ್ಲೋ ಮೀಟರ್‌ಗಳನ್ನು ಅಳವಡಿಸುವ ಕೆಲಸ ಕಾರ್ಯಗಳನ್ನು ಕೈಗೆತ್ತಿಕೊಳ್ಳಳಿದೆ. ಹೀಗಾಗಿ ಮಂಡಳಿಯು ಕಾಮಗಾರಿ ನಡೆಯುವ ಪ್ರದೇಶಗಳಲ್ಲಿ ನೀರಿನ ಪೂರೈಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಿದೆ.
ಯೋಜನೆಯ 4ನೇ ಹಂತದ 2ನೇ ಘಟ್ಟವನ್ನು ಸಂಪೂರ್ಣವಾಗಿ ಸ್ಥಗಿತವಾಗಲಿದ್ದು,ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ಜಲಮಂಡಳಿ ಮಾಹಿತಿ ನೀಡಿದೆ.ಸಾರ್ವಜನಿಕರು ಮಂಡಳಿಯೊಂದಿಗೆ ಸಹಕರಿಸಲು ಹಾಗೂ ಅಗತ್ಯವಿರುವ ನೀರನ್ನು ಶೇಖರಿಸಿಟ್ಟುಕೊಳ್ಳುವಂತೆ ಜಲಮಂಡಳಿಯಿಂದ ಕೋರಲಾಗಿದೆ.