Publish Date: Fri, 16 Feb 2018 (10:52 IST)
Updated Date: Fri, 16 Feb 2018 (10:54 IST)
ಬೆಂಗಳೂರು: ಕಾವೇರಿ ನದಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಅಂತಿಮ ತೀರ್ಪು ನೀಡಿದ್ದು, ಕರ್ನಾಟಕದ ಬಹುತೇಕ ವಾದಗಳನ್ನು ಕೋರ್ಟ್ ಒಪ್ಪಿಕೊಂಡಿದೆ.
ನೀರು ಹಂಚಿಕೆ ಕುರಿತಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು, ಬೆಂಗಳೂರಿಗೂ ನೀರಿನ ಪಾಲು ನೀಡಿದೆ. ಈವರೆಗೆ ಕರ್ನಾಟಕ ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ 7 ಟಿಎಂಸಿ ನೀರು ನೀಡಬೇಕೆಂದು ವಾದ ಮಂಡಿಸಿತ್ತು.
ಅದಕ್ಕೆ ಸಮ್ಮತಿ ನೀಡಿರುವ ಸುಪ್ರೀಂ ಕೋರ್ಟ್ ಬೆಂಗಳೂರಿಗೆ 4.5 ಟಿಎಂಸಿ ನೀರು ಬಳಸಲು ಅವಕಾಶ ನೀಡಿದೆ. ಅಷ್ಟೇ ಅಲ್ಲದೆ, ಕುಡಿಯುವ ನೀರಿನ ಬಳಕೆಗಾಗಿ 4.75 ಟಿಎಂಸಿ ನೀರನ್ನು ಕರ್ನಾಟಕ ಹೆಚ್ಚುವರಿಯಾಗಿ ಬಳಸಬಹುದು ಎಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ