Select Your Language

Notifications

webdunia
webdunia
webdunia
webdunia

ಪಾರಿವಾಳಗಳ ಮಾರಣಹೋಮ! ತಲೆ ಕತ್ತರಿಸಿ 23 ಪಾರಿವಾಳಗಳ ಕೊಂದ ಕಿಡಿಗೇಡಿಗಳು

ಪಾರಿವಾಳಗಳು
ಹುಬ್ಬಳ್ಳಿ , ಸೋಮವಾರ, 11 ಸೆಪ್ಟಂಬರ್ 2023 (14:03 IST)
ಹುಬ್ಬಳ್ಳಿ : ಹಳೆ ದ್ವೇಷದ ಹಿನ್ನೆಲೆ ದುಷ್ಕರ್ಮಿಗಳು ವ್ಯಕ್ತಿಯೊಬ್ಬರು ಸಾಕಿದ್ದ 23 ಪಾರಿವಾಳಗಳ ತಲೆ ಕತ್ತರಿಸಿ ಕೊಂದಿರುವ ಅಮಾನುಷ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ನಗರದ ಗೋಕುಲ ರಸ್ತೆಯಲ್ಲಿರೋ ಯಾವಗಲ್ ಪ್ಲಾಟ್ನಲ್ಲಿ ಘಟನೆ ನಡೆದಿದೆ. ಪಕ್ಷಿ ಪ್ರೇಮಿ ರಾಹುಲ್ ದಾಂಡೇಲಿ ಅವರು ಮನೆಯಲ್ಲಿ ಹಲವಾರು ಪಾರಿವಾಳಗಳನ್ನು ಸಾಕಿದ್ದರು. ಆದರೆ ಕಿಡಿಗೇಡಿಗಳು 23 ಪಾರಿವಾಳಗಳ ಕತ್ತು ಸೀಳಿ ಸಾಯಿಸಿದ್ದಾರೆ.

ಮನೆಯಲ್ಲಿ ಯಾರೂ ಇಲ್ಲದ ವೇಳೆ ನುಗ್ಗಿದ ದುಷ್ಕರ್ಮಿಗಳು ಚಾಕುವಿನಿಂದ ಪಾರಿವಾಳಗಳ ಕತ್ತನ್ನು ಸೀಳಿ ಕೊಂದಿದ್ದಾರೆ. ಇದೀಗ ಪಾರಿವಾಳಗಳನ್ನು ನಿರ್ದಯವಾಗಿ ಕೊಂದಿರುವ ದುಷ್ಕರ್ಮಿಗಳನ್ನು ತಕ್ಷಣವೇ ಬಂಧಿಸಬೇಕೆಂದು ಮಾಲೀಕರು ಆಗ್ರಹಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಖಾಸಗಿಯವರು ಬಂದ್ ಮಾಡುವ ಅವಶ್ಯಕತೆ ಇಲ್ಲ- ಡಿಕೆಶಿ