Publish Date: Wed, 19 Feb 2020 (21:02 IST)
Updated Date: Wed, 19 Feb 2020 (21:04 IST)
ಸಿನಿಮಾಗಳಲ್ಲಿ ತೋರಿಸುವಂತೆ ಹೈಟೆಕ್ ಕಾರುಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಖದೀಮರು, ತಮ್ಮ ಚಾಲಾಕಿತನಿಂದ ಕಾರ್ ಗಳನ್ನು ಕಳ್ಳತನ ಮಾಡ್ತಿದ್ರು.
ಕಾರ್ ಬಾಡಿಗೆ ಪಡೆದು ಆ ಬಳಿಕ ಕಾರಿನೊಂದಿಗೆ ಪರಾರಿಯಾಗಿ ಅದನ್ನು ಮಾರಾಟ ಮಾಡುತ್ತಿದ್ದ ವಂಚಕರಿಬ್ಬರನ್ನು ಪೊಲೀಸರು ಬಂಧನ ಮಾಡಿದ್ದಾರೆ.
ಅಕ್ಷಯ್ ಹಾಗೂ ಖಲೀಲ್ ಉಲ್ಲಾ ರನ್ನು ಬಂಧನ ಮಾಡಲಾಗಿದ್ದು, ಯಲಹಂಕ ನ್ಯೂಟೌನ್ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಕಳ್ಳರ ಅಸಲಿಯತ್ತು ಬಯಲಾಗಿದೆ.
ಕಾರ್ ಮಾಲೀಕರ ವಿಶ್ವಾಸ ಗಳಿಸಿ ಬಾಡಿಗೆ ನೆಪದಲ್ಲಿ ಕಾರನ್ನು ಕದ್ದು ಮಾರಾಟ ಮಾಡ್ತಿದ್ದರು. ಬಂಧಿತರಿಂದ 8 ಕಾರ್ ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.