Select Your Language

Notifications

webdunia
webdunia
webdunia
webdunia

ಜಮೀರ್ ಹೆಸರಲ್ಲಿ ಐಷಾರಾಮಿ ಕಾರು ಕದಿಯುತ್ತಿದ್ದ ಖದೀಮರು!

bangalore
ಶಾಸಕ ಜಮೀರ್ ಅಹಮ್ಮದ್ ಹೆಸರು ಹೇಳಿಕೊಂಡು ಐಶಾರಾಮಿ ಕಾರುಗಳನ್ನು ಕದಿಯುತ್ತಿದ್ದ ಕಳ್ಳರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.. ನಸೀಬ್, ಮೊಹಮ್ಮದ್ ಆಜಂ ಬಂಧಿತ ಆರೋಪಿಗಳು, ಶಾಸಕ ಜಮೀರ್ ಅಹಮ್ಮದ್ ಅವರ ಪಾಸ್ ಬಳಸಿಕೊಂಡು ತಿರುಗಾಡುತ್ತಿದ್ದ ಈ ಖತರ್ನಾಕ್ ಕಳ್ಳರು, ತಮ್ಮ ಫಾರ್ಚೂನರ್ ಕಾರಿಗೆ ಶಾಸಕರ ಪಾಸ್ ಅಂಟಿಸಿಕೊಂಡು ಸುತ್ತಾಡ್ತಿದ್ದ ವಂಚಕರು,  ಜಮೀರ್ ಅವರ ಆಪ್ತರು ಎಂದು ಹೇಳಿಕೊಂಡು ಹತ್ತಾರು ಮಂದಿಗೆ ಮಕ್ಮಲ್ ಟೋಪಿ ಹಾಕಿರೋದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಬಂಧಿತರಲ್ಲಿ ಆರೋಪಿ ನಸೀಬ್ ನ ಪತ್ನಿ ಐಸಿಐಸಿಐ ಬ್ಯಾಂಕ್ ನ ಮ್ಯಾನೇಜರ್ ಆಗಿದ್ದು,
ಮತ್ತೊರ್ವ ಆರೋಪಿ ಆಜಂ ಸೌದಿ ರಿಟರ್ನ್ ಎಂದು ತಿಳಿದು ಬಂದಿದೆ.. ಜಮೀರ್ ಅಪ್ತರೆಂದು ಹೇಳಿ ಕೊಂಡು ಮೂರು ಪ್ರಭಾವಿ ವ್ಯಕ್ತಿಗಳ ಕಾರನ್ನು ಕದ್ದು ಮಾರಾಟ ಮಾಡಿದ್ರು.. ದಾವಣಗೆರೆ ಜಿಲ್ಲೆಯ ಜೆಡಿಎಸ್ ಎಂ ಎಲ್ ಎ ಕ್ಯಾಂಡಿಡೇಟ್ ಅಸಾದುಲ್ಲಾ ರವರ  ಫಾರ್ಚೂನರ್ ಕಾರನ್ನು‌ ಕದ್ದು ಮಾರಾಟ ಮಾಡಿರೋದು ಹಾಗೇ ವೇಮಗಲ್ ನಲ್ಲಿ ವಕೀಲ ರೊಬ್ಬರಿಗೆ ಫೋರ್ಡ್ ಐ ಕಾನ್  ಕಾರು ಕೂಡ ಮಾರಾಟ ಮಾಡಿದ್ರು. ಕಾಂಗ್ರೆಸ್ ನ ಕಾರ್ಪೋರೇಟರ್ ಅಭ್ಯರ್ಥಿ ಲೋಕೇಶ್ ಗೂ ಕದ್ದ ಎಕ್ಸ್ ಯೂ ವಿ ಕಾರು ಮಾರಾಟ ಮಾಡಿದ್ರು..ಸದ್ಯ ಮೂರು ಮಂದಿ ಆರೋಪಿಗಳನ್ನ ಸಿಸಿಬಿ ಪೊಲೀಸರು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಎಸ್.ಎಸ್.ಎಲ್.ಸಿ ಪರೀಕ್ಷಾ ಕೇಂದ್ರ ಪರಿಶೀಲಿಸಿದ ಶಿಕ್ಷಣ ಸಚಿವ ಸುರೇಶ್ ಕುಮಾರ್