50 ವರ್ಷದೊಳಗಿನವರಲ್ಲಿ ಹೊಸ ಕ್ಯಾನ್ಸರ್ ಪ್ರಕರಣದಲ್ಲಿ ಶೇ. 79ರಷ್ಟು ಹೆಚ್ಚಳ ಕಂಡುಬಂದಿದೆ. ಹಾಗೇ, ಕ್ಯಾನ್ಸರ್ನಿಂದ ಸಾವನ್ನಪ್ಪುವವರ ಸಂಖ್ಯೆ ಶೇ. 28ರಷ್ಟು ಹೆಚ್ಚಾಗಿದೆ ಎಂಬ ಅಂಶವನ್ನು ಸಂಶೋಧಕರು ತಿಳಿಸಿದ್ದಾರೆ. ಮೆಡಿಕಲ್ ಜರ್ನಲ್ ಪ್ರಕಟವಾದ ಅಧ್ಯಯನದ ಪ್ರಕಾರ, 1990ರಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ 1.82 ಮಿಲಿಯನ್ ಇದ್ದುದ 2019ರಲ್ಲಿ 3.26 ಮಿಲಿಯನ್ಗೆ ಏರಿಕೆಯಾಗಿದೆ.ಇನ್ನು ಹೆಪಟೈಟಿಸ್ ಬಿ ವ್ಯಾಕ್ಸಿನೇಷನ್ ಯಕೃತ್ತಿನ ಕ್ಯಾನ್ಸರ್ ಅನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಮೆಡಾಂತ ಇನ್ಸ್ಟಿಟ್ಯೂಟ್ ಆಫ್ ಡೈಜೆಸ್ಟಿವ್ ಮತ್ತು ಹೆಪಟೊಬಿಲಿಯರಿ ಸೈನ್ಸ್ ಅಧ್ಯಕ್ಷ ಡಾ. ರಣಧೀರ್ ಸೂದ್ ಹೇಳಿದ್ದಾರೆ.ಇನ್ನು ಹೊಸ ಆರಂಭಿಕ ಕ್ಯಾನ್ಸರ್ ಪ್ರಕರಣಗಳ ಜಾಗತಿಕ ಸಂಖ್ಯೆಯು 2030ರ ವೇಳೆಗೆ ಶೇ. 31ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಅದಕ್ಕೆ ಸಂಬಂಧಿತ ಸಾವುಗಳ ಪ್ರಮಾಣ ಶೇ. 21ರಷ್ಟು ಹೆಚ್ಚಾಗಬಹುದು ಎಂದು ಸಂಶೋಧಕರು ಅಂದಾಜಿಸಿದ್ದಾರೆ.