Webdunia - Bharat's app for daily news and videos

Install App

ಶಸ್ತ್ರಚಿಕಿತ್ಸೆ ಇಲ್ಲದೇ ವೆರಿಕೋಸ್ ವೇಯ್ನ್ ನೋವನ್ನು ಪರಿಹರಿಸಿಕೊಳ್ಳಬಹುದೇ? ಇಲ್ಲಿದೆ ಅಂಥದೊಂದು ಮಾರ್ಗ

Webdunia
ಮಂಗಳವಾರ, 4 ಜನವರಿ 2022 (17:53 IST)
ವೆರಿಕೋಸ್ ವೇಯ್ನ್ ಅಥವಾ ರಕ್ತನಾಳಗಳ ಉಬ್ಬುವಿಕೆ. ಇದು ಇವತ್ತಿಗೆ ವಯೋಮಾನ ಬೇಧವಿಲ್ಲದೇ ಬಹುತೇಕರನ್ನು ಕಾಡುತ್ತಿರುವ ಒಂದು ಗಂಭೀರ ಸಮಸ್ಯೆ.
ವರದಿಯೊಂದರ ಪ್ರಕಾರ ಭಾರತದಲ್ಲಿ ಪ್ರತಿವರ್ಷ ಒಂದು ಕೋಟಿ ಜನ ಇದರಿಂದ ಬಳಲುತ್ತಾರೆ. ಶೇ. 30ರಷ್ಟು ಇದರಲ್ಲಿ ಯುವ ಜನರೇ ಇದ್ದಾರೆ.
ರಕ್ತಪರಿಚಲನೆಯಲ್ಲಿ ಅಡೆತಡೆ ಉಂಟಾದಾಗ ನರಗಳು ಉಬ್ಬಿಕೊಳ್ಳುವ ಈ ಪ್ರಕ್ರಿಯೆ ಹಲವು ಕಾರಣಗಳಿಂದ ಬರುತ್ತದೆ. ಕಾಲುಗಳು ಜೋಮು ಹಿಡಿಯುವುದು, ಮೀನಖಂಡಗಳು ಹಿಡಿದುಕೊಂಡಂತಾಗುವುದು ಇಂಥ ಸಮಸ್ಯೆಗಳಿಂದ ಪ್ರಾರಂಭವಾಗಿ ಚರ್ಮ ಕಪ್ಪಾಗುವಿಕೆ, ತುರಿಕೆ ಇಂಥ ಸಮಸ್ಯೆಗಳ ಕಡೆಗೂ ವಿಸ್ತರಿಸಿಕೊಳ್ಳುವುದನ್ನು ಕಾಣಬಹುದು. ಕೆಲವೊಂದು ಪ್ರಕರಣಗಳಲ್ಲಿ ಬೆರಳುಗಳನ್ನೇ ತೆಗೆಯಬೇಕಾದ, ಕಾಲನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಬೇಕಾದ ಪ್ರಕರಣಗಳವರೆಗೂ ಹೋಗಿರುವುದನ್ನು ಕಾಣಬಹುದು.
ಹೀಗೆಲ್ಲ ನರಳಾಟ ಅನುಭವಿಸುತ್ತಿರುವವರ ಪಾಲಿಗೆ ಆಶಾಕಿರಣ ಡಾ.ಎಂ.ವಿ ಉರಾಳ್. ಈ ವೆರಿಕೋಸ್ ವೇಯ್ನ್ ಗಳ ಪರಿಹಾರಕ್ಕೆಂದು ಆಯುರ್ವೇದದಲ್ಲಿ ಹೊಸ ಔಷಧಿಯ ಆವಿಷ್ಕಾರ ಮಾಡಿದ್ದಾರೆ. ಇವರು ಮೂಲತಃ ಉಡುಪಿ ಜಿಲ್ಲೆಯವರು. ಕೊಪ್ಪದಲ್ಲಿ ಆಯುರ್ವೇದ ಕೋರ್ಸ್ (ಬಿ.ಎ.ಎಂ.ಎಸ್) ಪೂರೈಸಿದ್ದಾರೆ. ಸಂಶೋಧನಾ ಸಂಸ್ಥೆಗಳ ಸಹಯೋಗದೊಂದಿಗೆ ಅವರು ಶಸ್ತ್ರ ಚಿಕಿತ್ಸೆ ಇಲ್ಲದೆ ವೆರಿಕೋಸ್ ವೈಯ್ನ್ ಅನ್ನು ಕಡಿಮೆ ಮಾಡುವಂತ ಔಷಧ ಸಿದ್ಧಪಡಿಸಿದ್ದಾರೆ. ಈವರೆಗೆ 3,000 ಕ್ಕೂ ಹೆಚ್ಚು ರೋಗಿಗಳಿಗೆ ಯಶಸ್ವಿ ವೆರಿಕೋಸ್ ವೇಯ್ನ್ ಗುಣಪಡಿಸಿದ್ದಾರೆ.
 
ಹುಬ್ಬಳ್ಳಿಯಲ್ಲಿ ಸೇವಾ ಲಭ್ಯತೆ
 
2022ರ ಜನವರಿ ಆರರಂದು ಮತ್ತು 20ರಂದು ಹುಬ್ಬಳ್ಳಿಯಲ್ಲಿ ಡಾ ಉರಾಳ್ಸ್ ವೆರಿಕೋಸ್ ವೇನ್ಸ್ ಆಯುರ್ವೇದ ಕೇರ್ ಸಂಸ್ಥೆಯ ವೈದ್ಯರು ಚಿಕಿತ್ಸೆ ಗೆ ಲಭ್ಯವಿರುತ್ತಾರೆ. ಅದಾದ ನಂತರ ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಗುರುವಾರದಂದು ಹುಬ್ಬಳ್ಳಿಯ ಪಿಬಿ ರಸ್ತೆಯ ಕಲ್ಮೇಶ್ವರ ಕ್ಲಿನಿಕ್ ನಲ್ಲಿ ವೈದ್ಯರು ವೆರಿಕೋಸ್ ವೇಯ್ನ್ ಚಿಕಿತ್ಸೆಗೆ ಲಭ್ಯರಿರುತ್ತಾರೆ.
ಉಳಿದಂತೆ ಬೆಂಗಳೂರು, ಮಂಗಳೂರು, ಮೈಸೂರು, ಹಾಸನ, ಶಿವಮೊಗ್ಗ, ಕೋಲಾರ, ಬಳ್ಳಾರಿ, ಕುಶಾಲನಗರ, ಸಾಗರ, ರಾಯಚೂರು, ಬೀದರ್, ನಾರಾಯಣಪುರ ಪುನಾ, ಹೈದ್ರಾಬಾದ್ ನಲ್ಲಿ ಡಾ. ಉರಾಳ್ ಅವರ ಸಂಸ್ಥೆಯಿಂದ ಚಿಕಿತ್ಸೆ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 8431114028, 8105371042 ಸಂಖ್ಯೆಯನ್ನು ಸಂಪರ್ಕಿಸಬಹುದು.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments