Select Your Language

Notifications

webdunia
webdunia
webdunia
webdunia

ವಿಕ್ರಮ್ ಲ್ಯಾಂಡರ್ ಜತೆ ಸಂಪರ್ಕ ಸಾಧಿಸಲು ಆಗಿಲ್ಲ- ಇಸ್ರೋ ಟ್ವೀಟ್

ವಿಕ್ರಮ್ ಲ್ಯಾಂಡರ್ ಜತೆ ಸಂಪರ್ಕ ಸಾಧಿಸಲು ಆಗಿಲ್ಲ- ಇಸ್ರೋ ಟ್ವೀಟ್
ಬೆಂಗಳೂರು , ಮಂಗಳವಾರ, 10 ಸೆಪ್ಟಂಬರ್ 2019 (11:40 IST)
ಬೆಂಗಳೂರು : ವಿಕ್ರಮ್ ಲ್ಯಾಂಡರ್ ಜತೆ ಸಂಪರ್ಕ ಸಾಧಿಸಲು ಆಗಿಲ್ಲ ಎಂದು ಟ್ವೀಟರ್ ಮೂಲಕ ಇಸ್ರೋ ಮಾಹಿತಿ ನೀಡಿದ್ದಾರೆ.




ಚಂದಿರನ ಅಂಗಳದಲ್ಲಿ ಹಾರ್ಡ್ ಲ್ಯಾಂಡಿಂಗ್ ಆಗಿದ್ದ ವಿಕ್ರಮ್ ವಾಲಿದ ಸ್ಥಿತಿಯಲ್ಲಿದೆ. ಇಸ್ರೋ ವಿಜ್ಞಾನಿಗಳಿಂದ ಲ್ಯಾಂಡರ್ ಸಂಪರ್ಕಕ್ಕೆ ಶತ ಪ್ರಯತ್ನ ನಡೆಸುತ್ತಿದ್ದು ವಿಕ್ರಮ್ ಜೊತೆ ಸಂಪರ್ಕ ಸಾಧಿಸಲು ಆಗಿಲ್ಲ. ವಿಕ್ರಮ್ ಲ್ಯಾಂಡರ್ ಸಂಪರ್ಕಿಸಲು ಪ್ರಯತ್ನ ಮುಂದುವರಿದಿದೆ ಎಂದು  ಇಸ್ರೋ ಟ್ವೀಟ್ ಮಾಡಿದೆ.


ಭಾರತೀಯರು ಕುತೂಹಲದಿಂದ ಕಾಯುತ್ತಿದ್ದ ಚಂದ್ರಯಾನ 2 ಲ್ಯಾಂಡಿಂಗ್ ಕೊನೆಯ ಕ್ಷಣದಲ್ಲಿ ಅಂದರೆ ಚಂದ್ರನ ತಲುಪಲು 2.1 ಕಿ.ಮೀ. ದೂರವಿದೆ ಎನ್ನುವಾಗ ರೋವರ್ ವಿಕ್ರಮ ಸಂವಹನ ಕಡಿದುಕೊಂಡಿದೆ. ಇದರಿಂದಾಗಿ ಚಂದ್ರನ ನೆಲಮುಟ್ಟಲಿರುವ ಕ್ಷಣಗಳನ್ನು ನೋಡಲು ಕಾಯುತ್ತಿದ್ದ ಕೋಟ್ಯಂತರ ಭಾರತೀಯರ ಆಸೆ ನಿರಾಸೆಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಿಕ್ಕಬಳ್ಳಾಪುರ ಜಿಲ್ಲೆಗೆ ಅನುದಾನ ಬಿಡುಗಡೆಯಲ್ಲಿ ತಾರತಮ್ಯ ಮಾಡಿದ್ರಾ ಸಿಎಂ?