ಇಂದಿನಿಂದ ಐತಿಹಾಸಿಕ ಕರಗ ಮಹೋತ್ಸವಕ್ಕೆ ಚಾಲನೆ ಸಿಕ್ಕಿದ್ದು, ನಾಳೆಯಿಂದ ಏಪ್ರಿಲ್ 12ರ ಮಂಗಳವಾರದವರೆಗೂ ದೇವಸ್ಥಾನದಲ್ಲಿ ದ್ರೌಪದಮ್ಮನಿಗೆ ವಿಶೇಷ ಪೂಜೆ ನಡೆಯುತ್ತದೆ. ಏಪ್ರಿಲ್ 13 ಬುಧವಾರ ದ್ವಾದಶಿಯಂದು - ರಾತ್ರಿ ಮೂರು ಗಂಟೆಗೆ ದೀಪಾರತಿ, ಏಪ್ರಿಲ್ 14 ಗುರುವಾರ ತ್ರಯೋದಶಿಯಂದು ರಾತ್ರಿ ಮೂರು ಗಂಟೆಗೆ ಹಸಿ ಕರಗ, ಏಪ್ರಿಲ್ 15 ಶುಕ್ರವಾರ ಚತುರ್ದಶಿ ರಾತ್ರಿ ಮೂರು ಗಂಟೆಗೆ ಪುರಾಣ ಕಥನ - ಪೊಂಗಲ್ ಸೇವೆ, ಏಪ್ರಿಲ್ 16ರ ಶನಿವಾರ ಚೈತ್ರ ಪೊರ್ಣಿಮಾ ಹೂವಿನ ಕರಗ ಮಹೋತ್ಸವ ಹಾಗೂ ಧರ್ಮರಾಯಸ್ವಾಮಿ ಮಹಾ ರಥೋತ್ಸವ ನಡೆಯಲಿದೆ. ಕರಗಕ್ಕೆ 50 ಲಕ್ಷ ರೂಪಾಯಿ ಸಹಾಯಧನ ಹಣ ಬಿಡುಗಡೆ ಮಾಡಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಹೇಳಿದ್ದಾರೆ.