Select Your Language

Notifications

webdunia
webdunia
webdunia
webdunia

ಕಾಡಾನೆ ದಾಳಿ ಪ್ರಕರಣ

ಕಾಡಾನೆ ದಾಳಿ ಪ್ರಕರಣ
hasana , ಶನಿವಾರ, 12 ಮಾರ್ಚ್ 2022 (18:40 IST)
ಕಾಡಾನೆ ಹಾವಳಿ ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ. ಸಿಎಂ ಸ್ಥಳಕ್ಕೆ ಬರೋವರೆಗೂ ಮೃತದೇಹ ತೆಗೆಯಲು ಬಿಡಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.ಡೆಗರ್ಜೆ ಬಳಿ ಕಾಡಾನೆ ದಾಳಿ (Wild Elephant attack)ಗೆ ಇಬ್ಬರು ಕಾರ್ಮಿಕರು ಬಲಿ ಆಗಿರುವಂತಹ ಘಟನೆ ನಡೆದಿದೆ. ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಕಡೆಗರ್ಜೆ ಗ್ರಾಮದಲ್ಲಿ ಘಟನೆ ನಡೆದಿದ್ದು, ಬೆಳ್ಳಂ ಬೆಳಿಗ್ಗೆ ಕಾಫಿತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಾಡಾನೆ ದಾಳಿ ಮಾಡಿದೆ. ಕಳೆದ ಹಲವು ದಿನಗಳಿಂದ ಈ ಭಾಗದಲ್ಲಿ ಆತಂಕ ಸೃಷ್ಟಿ ಮಾಡಿದ್ದ ಕಾಡಾನೆ, ಇಂದು ಅದರ ದಾಳಿಗೆ ಚಿಕ್ಕಯ್ಯ(65), ಚಿಕ್ಕಯ್ಯ(68) ಬಲಿಯಾಗಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶಗೊಂಡಿದ್ದು, ಕಾಡಾನೆ ದಾಳಿ ನಿಯಂತ್ರಿಸದ ಅಧಿಕಾರಿಗಳ ವಿರುದ್ಧ ರಸ್ತೆಗೆ ಬೆಂಕಿ ಹಚ್ಚಿ, ರಸ್ತೆ ತಡೆದು ಗ್ರಾಮಸ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೇಲೂರು ಸಕಲೇಶಪುರ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ತಡೆದಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ಜನರು ಆಕ್ರೋಶಗೊಂಡಿದ್ದು, ಸ್ಥಳಕ್ಕೆ ಸಿಎಂ ಬರಲೇಬೇಕು ಎಂದು ಪಟ್ಟು ಹಿಡಿದು ಹೋರಾಟ ಮಾಡುತ್ತಿದ್ದಾರೆ. ಕಾಡಾನೆ ಹಾವಳಿ ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ. ಸಿಎಂ ಸ್ಥಳಕ್ಕೆ ಬರೋವರೆಗೂ ಮೃತದೇಹ ತೆಗೆಯಲು ಬಿಡಲ್ಲ ಎಂದು ಪಟ್ಟು ಹಿಡಿದಿದ್ದಾರೆ.
 
ಹೋರಾಟ ನಿರತರ ಕಣ್ತಪ್ಪಿಸಿ ಮೃತದೇಹ ಸ್ಥಳಾಂತರಕ್ಕೆ ಯತ್ನಿಸಿದ್ದು, ಯಾವುದೇ ಕಾರಣದಿಂದ ಮೃತದೇಹ ಸ್ಥಳಾಂತರ ಮಾಡಕೂಡದು ಎಂದು ಪಟ್ಟು ಹಿಡಿದಿದ್ದಾರೆ. ಕಾಫಿ ತೋಟದ ರಸ್ತೆಗೆ ಅಡ್ಡಲಾಗಿ ಮರದ ತುಂಡು ಹಾಕಿ, ಅಧಿಕಾರಿಗಳ ನಡೆ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅರೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.ಕಡೆಗರ್ಜೆ ಬಳಿ ಕಾಡಾನೆ ದಾಳಿಗೆ ಇಬ್ಬರು ಕಾರ್ಮಿಕರು ಬಲಿ ಆಗಿರುವಂತಹ ಘಟನೆ ನಡೆದಿದೆ. ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಕಡೆಗರ್ಜೆ ಗ್ರಾಮದಲ್ಲಿ ಘಟನೆ ನಡೆದಿದ್ದು, ಬೆಳ್ಳಂ ಬೆಳಿಗ್ಗೆ ಕಾಫಿತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಾಡಾನೆ ದಾಳಿ ಮಾಡಿದೆ.ಪತ್ನಿಯನ್ನು ಹತ್ಯೆಗೈದು ಪತಿ ನೇಣಿ (hanga) ಗೆ ಶರಣಾದಂತಹ ಘಟನೆ ನಡೆದಿದೆ. ಧಾರವಾಡದ ಗಣೇಶ ನಗರದಲ್ಲಿ ಘಟನೆ ನಡೆದಿದ್ದು, ಕಳೆದ ರಾತ್ರಿ ದಂಪತಿ ಮಧ್ಯೆ ಗಲಾಟೆ ಹಿನ್ನೆಲೆ ಪತ್ನಿ ಮನೀಷಾ (25)ಳನ್ನು ಕೊಲೆ ಮಾಡಿದ್ದು, ಬಳಿಕ ಪತಿ ಗದಗವಾಲೆ(30) ನೇಣಿಗೆ ಶರಣಾಗಿದ್ದಾನೆ. ನಾಲ್ಕು ದಿನಗಳ ಹಿಂದಷ್ಟೇ ದಂಪತಿಗಳಿಬ್ಬರು ಗೋವಾದಲ್ಲಿ ಕೆಲಸಕ್ಕೆ ಎಂದು ಹೋಗಿಬಂದಿದ್ದರು. ಕಳೆದ ರಾತ್ರಿ ಇಬ್ಬರ ನಡುವೆ ಜಗಳ ನಡೆದಿದ್ದು, ರಾತ್ರಿಯೇ ಪತ್ನಿಯನ್ನ ಪತಿ ಕೊಲೆ ಮಾಡಿದ್ದಾನೆ. ಬಳಿಕ ತಾನು ನೇಣಿಗೆ ಶರಣಾಗಿದ್ದಾನೆ. ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೃಷಿ ವಿರೋಧಿ ವಿರುದ್ಧ ಹೋರಾಟ