Publish Date: Wed, 13 Jan 2021 (11:11 IST)
Updated Date: Wed, 13 Jan 2021 (11:12 IST)
ಬೆಂಗಳೂರು : ಸಚಿವ ಸಂಪುಟ ವಿಸ್ತರಣೆ, ಪುನಾರಚನೆ ನಿಗೂಢವಾಗಿದೆ ಎಂದು ಬಿಜೆಪಿ ಶಾಸಕ ನೆಹರು ಓಲೇಕಾರ್ ಹೇಳಿದ್ದಾರೆ.
ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೆ. ಯಾರಿಗೆಲ್ಲಾ ಅವಕಾಶ ಕೊಡುತ್ತಾರೋ ನೋಡಬೇಕಿದೆ. ಬಹಳ ವರ್ಷಗಳಿಂದ ಪಕ್ಷದಲ್ಲಿ ಕೆಲಸ ಮಾಡುತ್ತಿದ್ದೇನೆ. ನಾಯಕರು ಈಗಾಗಲೇ ನನಗೊಂದು ಹುದ್ದೆ ಕೊಟ್ಟಿದ್ದಾರೆ. ಮತ್ತೊಂದು ಹುದ್ದೆ ಅವಕಾಶ ಕೊಡ್ತಾರೆಂಬ ವಿಶ್ವಾಸವಿಲ್ಲ ಎಂದು ಅವರು ತಿಳಿಸಿದ್ದಾರೆ.