Select Your Language

Notifications

webdunia
webdunia
webdunia
webdunia

ಮೌಢ್ಯ ಪ್ರತಿಬಂಧಕ ವಿಧೇಯಕಕ್ಕೆ ಸಚಿವ ಸಂಪುಟದಿಂದ ಅನುಮೋದನೆ

ಮೌಢ್ಯ ಪ್ರತಿಬಂಧಕ ವಿಧೇಯಕಕ್ಕೆ ಸಚಿವ ಸಂಪುಟದಿಂದ ಅನುಮೋದನೆ
ಬೆಂಗಳೂರು , ಬುಧವಾರ, 27 ಸೆಪ್ಟಂಬರ್ 2017 (15:36 IST)
ಬೆಂಗಳೂರು: ಮೌಢ್ಯ ಪ್ರತಿಬಂಧಕ ಅಮಾನವೀಯ ದುಷ್ಟ ಮತ್ತು ವಾಮಾಚಾರ ನಿರ್ಮೂಲನೆ ವಿಧೇಯಕ-2017ಕ್ಕೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ.

ಸಂಪುಟ ಸಭೆ ಬಳಿಕ ಮಾತನಾಡಿದ ಅವರು, ಮುಂದಿನ ಅಧಿವೇಶನದಲ್ಲಿ ವಿಧೇಯಕ ಮಂಡನೆಯಾಗಲಿದ್ದು, ವಿಧೇಯಕದ ಮೇಲೆ ಚರ್ಚೆ ನಡೆಯಲಿದೆ. ಚರ್ಚೆ ಬಳಿಕ ವಿಧಾನಸಭೆಯಲ್ಲಿ ವಿಧೇಯಕ ಪಾಸ್ ಆಗಬೇಕು. ಬಿಲ್ ಪಾಸ್ ಆದರೆ, ಎಂಜಲೆಲೆ ಮೇಲೆ ಉರುಳುವ ಮಡೆಸ್ನಾನಕ್ಕೆ ಇನ್ಮುಂದೆ ಅವಕಾಶ ಇರುವುದಿಲ್ಲ ಎಂದರು.

ಇನ್ನು ಕೆಂಡ ಹಾಯುವುದು ಯಾವುದೇ ಅಡ್ಡಿ ಇಲ್ಲ. ಆದರೆ ಒತ್ತಾಯಪೂರ್ವಕವಾಗಿ ಕೆಂಡ ಹಾಯಿಸಬಾರದು. ಬೆತ್ತಲೆ ಸೇವೆ ಸಂಪೂರ್ಣ ನಿಷೇಧವಾಗಲಿದ್ದು, ದೇವರ ಹೆಸರಿನಲ್ಲಿ ಹಿಂಸೆಗೆ ಆಸ್ಪದ ನೀಡುವುದಿಲ್ಲ. ಉರುಳು ಸೇವೆಯನ್ನೂ ಇನ್ನು ನಿಷೇಧವಾಗಲಿದೆ. ಜೈನ ಸಮುದಾಯದ ಕೇಶಲೋಚನಕ್ಕೆ ಯಾವುದೇ ನಿರ್ಬಂಧವಿಲ್ಲ ಎಂದು ಸಚಿವ ಜಯಚಂದ್ರ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗೋವಾ ಸಿಎಂ ಮನೋಹರ್ ಪರಿಕ್ಕರ್‍‌ಗೆ ಕನ್ನಡ ಸಂಘಟನೆಗಳ ಧಿಕ್ಕಾರ