Select Your Language

Notifications

webdunia
webdunia
webdunia
webdunia

ಗವರ್ನರ್ ತೆರಳಿದ ಬಳಿಕ ಭೈರತಿ ಸುರೇಶ್ ಪುತ್ರನ ನಿಶ್ಚಿತಾರ್ಥಕ್ಕೆ ಸಿಎಂ ಸಿದ್ದರಾಮಯ್ಯ ಹಾಜರ್

Chief Minister Siddaramaiah

Sampriya

ಬೆಂಗಳೂರು , ಬುಧವಾರ, 28 ಆಗಸ್ಟ್ 2024 (17:18 IST)
Photo Courtesy X
ಬೆಂಗಳೂರು: ಇಂದು ಯಲಹಂಕದ ಬಿಜೆಪಿ ಶಾಸಕ ಎಸ್‌ಆರ್ ವಿಶ್ವನಾಥ್ ಪುತ್ರಿ ಅಪೂರ್ವ ಹಾಗೂ ಕಾಂಗ್ರೆಸ್ ಸಚಿವ ಬೈರತಿ ಸುರೇಶ್ ಪುತ್ರ ಸಂಜಯ್ ಅವರ ನಿಶ್ಚಿತಾರ್ಥವು ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನೆರವೇರಿತು.

ಈ ಸಮಾರಂಭದಲ್ಲಿ  ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸೇರಿದಂತೆ ಇಬ್ಬರು ನಾಯಕರ ರಾಜಕೀಯ ಆಪ್ತರು ಭಾಗವಹಿಸಿ ಜೋಡಿಗೆ ಶುಭಹಾರೈಸಿದರು. ಇನ್ನೂ ಸಿಎಂ ಸಿದ್ದರಾಮಯ್ಯ ಮಾತ್ರ ರಾಜ್ಯಪಾಲರು ನಿಶ್ಚಿತಾರ್ಥ ಸಮಾರಂಭದಿಂದ ತೆರಳಿದ ಬಳಿಕ ಆಗಮಿಸಿ, ಜೋಡಿಗೆ ಶುಭಹಾರೈಸಿದರು. ಈ ವೇಳೆ ಬೈರತಿ ಸುರೇಶ್ ಹಾಗೂ ವಿಶ್ವನಾಥ್ ಕುಟುಂಬದ ಜತೆ ಸಿಎಂ ಸಿದ್ದರಾಮಯ್ಯ ಫೋಟೋ ಪೋಸ್ ನೀಡಿದರು.

ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿರುವುದಕ್ಕೆ ಕಾಂಗ್ರೆಸ್ ಭಾರೀ ಆಕ್ರೋಶವನ್ನು ಹೊರಹಾಕಿದೆ. ಅದಲ್ಲದೆ ರಾಜ್ಯಪಾಲರ ನಡೆಯ ವಿರುದ್ಧ ಸಿಎಂ ಸಿದ್ದರಾಮಯ್ಯ ಅವರು ಹಲವು ಪ್ರಶ್ನೆ ಮಾಡಿದ್ದಾರೆ.  

ಸದ್ಯ ರಾಜ್ಯರಾಜಕಾರಣದಲ್ಲಿ ರಾಜ್ಯಪಾಲರ ಕಚೇರಿ ಹಾಗೂ ಕಾಂಗ್ರೆಸ್ ಸರ್ಕಾರದ ನಡುವೆ ಕಿತ್ತಾಟ ಜೋರಾಗಿದೆ.  ಆದರೆ ಇದನ್ನೆಲ್ಲ ಮರೆತು ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಒಟ್ಟಿಗೆ ಊಟ ಸವಿದು, ಕೆಲಹೊತ್ತು ಕೂತು ಮಾತುಕತೆ ನಡೆಸಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಕೋರ್ಟ್ ನಲ್ಲಿ ಪವಿತ್ರಾಗೌಡಗೆ ಬಿಸಿ ಮುಟ್ಟಿಸಿದ ಎಸ್ ಪಿಪಿ ಪ್ರಸನ್ನಕುಮಾರ್