Select Your Language

Notifications

webdunia
webdunia
webdunia
webdunia

ಉಪಚುನಾವಣೆಯಲ್ಲಿ ಯಾವ ಪಕ್ಷ ಗೆದ್ದರೆ ಏನಾಗುತ್ತೆ..? ಇಲ್ಲಿದೆ ಸರಳ ವಿಶ್ಲೇಷಣೆ

siddaramaiah
ಮುಂಬರುವ ವಿಧಾನಸಭಾ ಚುನಾವಣೆಗೆ ಸೆಮಿಫೈನಲ್ ಎಂದೇ ಪರಿಗಣಿಸಲಾಗುತ್ತಿರುವ ಗುಂಡ್ಲುಪೇಟೆ ಮತ್ತು ನಂಜನಗೂಡು ಉಪಚುನಾವಣಾ ಫಲಿತಾಂಶ ನಾಳೆ ಹೊರಬೀಳಲಿದೆ. ಸಿಎಂ ಸಿದ್ದರಾಮಯ್ಯ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನಡುವಿನ ಹೋರಾಟ ಎಂದೇ ವಿಶ್ಲೇಷಿಸಲಾಗುತ್ತಿರುವ ಈ  ಉಪಚುನಾವಣಾ ಫಲಿತಾಂಶ ಈ ಇಬ್ಬರೂ ಮಾಸ್ ಲೀಡರ್`ಗಳ ರಾಜಕೀಯ ಭವಿಷ್ಯದಲ್ಲಿ ಭಾರೀ ಪರಿಣಾಮ ಬೀರುತ್ತೆ ಎಂದೇ ಹೇಳಲಾಗುತ್ತಿದೆ. ಇಬ್ಬೀ ನಿರೀರೂ ನಾಯಕರೂ ಫಲಿತಾಂಶದ ಬಗ್ಗೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕಾಂಗ್ರೆಸ್ ಗೆದ್ದರೆ ಏನಾಗಬಹುದು.. ಬಿಜೆಪಿ ಗೆದ್ದರೆ ಏನಾಗಬಹುದು ಎಂಬುದರ ಸರಳ ಚಿತ್ರಣ ಇಲ್ಲಿದೆ.

ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದರೆ
-      ದೇಶದ ಹಲವೆಡೆ ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್`ಗೆ ದೊಡ್ಡ ಬೂಸ್ಟ್ ಸಿಗಲಿದೆ.
-      ಸಿದ್ದರಾಮಯ್ಯನವರ 4 ವರ್ಷಗಳ ಆಡಳಿತ ಮತ್ತು ನಾಯಕತ್ವವನ್ನ ಜನ ಒಪ್ಪಿಕೊಂಡಿದ್ದಾರೆಂದೇ ಬಿಂಬಿಸಬಹುದು.
-      ಮುಂಬರುವ ವಿಧಾನಸಭಾ ಚುನಾವಣೆಯನ್ನ ಸಿದ್ದರಾಮಯ್ಯ ನೇತೃತ್ವದಲ್ಲೇ ಎದುರಿಸಬಹುದು.
-      ಕರ್ನಾಟಕದಲ್ಲಿ ನರೇಂದ್ರಮೋದಿ ಹವಾ ಇಲ್ಲ ಎಂದು ಕಾಂಗ್ರೆಸ್ ಪ್ರಚಾರ ಮಾಡಬಹುದು.
ಮುಂಬರುವ ವಿಧಾನಸಭಾಚುನಾವಣೆಯನ್ನ ಆತ್ಮವಿಶ್ವಾಸದಿಂದ ಎದುರಿಸಬಹುದು
-      ಸಿಎಂ ಸಿದ್ದರಾಮಯ್ಯ ಮಾತಿಗೆ ಹೈಕಮಾಂಡ್ ಬೆಂಬಲ ಸಿಗಬಹುದು. ಬೇರೆ ನ಻ಯಕರು ಚಕಾರ ೆತ್ತಲು ಅಸಾಧ್ಯವಾಗಬಹುದು.

ಉಪಚುನಾವಣೆಯಲ್ಲಿ ಬಿಜೆಪಿ ಗೆದ್ದರೆ
-      ಯಡಿಯೂರಪ್ಪನವರ ನಾಯಕತ್ವಕಕೆ ಹೈಕಮಾಂಡ್`ನಿಂದ ಸಂಪೂರ್ಣ ಬೆಂಬಲ ಸಿಗಬಹುದು.
-      ಮುಂದಿನ ಚುನಾವಣೆಗೆ ಇದನ್ನೇ ಟ್ರಂಪ್ ಕಾರ್ಡ್ ಆಗಿ ಬಳಸಬಹುದು
-      ಪ್ರಧಾನಮಂತ್ರಿ ನರೇಂದ್ರಮೋದಿ ಹವಾ ಕರ್ನಾಟಕದಲ್ಲೂ ಇದೆ ಎಂದು ಬಿಂಬಿಸಬಹುದು
-      ಬಿಜೆಪಿ ಮಿಶನ್-150 ಪರಿಕಲ್ಪನೆಗೆ ಮತ್ತಷ್ಟು ಬೂಸ್ಟ್ ಸಿಗಬಹುದು
-      ಯಡಿಯೂರಪ್ಪ ವಿರುದ್ಧ ಪಕ್ಷದಲ್ಲಿ ಎದ್ದಿರುವ ಇತರೆ ನಾಯಕರ ಧ್ವನಿ ತಣ್ಣಗಾಗಬಹುದು

Share this Story:

Follow Webdunia kannada

ಮುಂದಿನ ಸುದ್ದಿ

ಪತಿಯ ಅನೈತಿಕ ಸಂಬಂಧ: ಪತ್ನಿಯಿಂದಲೇ ಪತಿ ಹತ್ಯೆಗೆ ಸ್ಕೇಚ್