Select Your Language

Notifications

webdunia
webdunia
webdunia
webdunia

ಪತಿಯ ಅನೈತಿಕ ಸಂಬಂಧ: ಪತ್ನಿಯಿಂದಲೇ ಪತಿ ಹತ್ಯೆಗೆ ಸ್ಕೇಚ್

ಪತಿಯ ಅನೈತಿಕ ಸಂಬಂಧ: ಪತ್ನಿಯಿಂದಲೇ ಪತಿ ಹತ್ಯೆಗೆ ಸ್ಕೇಚ್
ಬೆಂಗಳೂರು , ಬುಧವಾರ, 12 ಏಪ್ರಿಲ್ 2017 (19:31 IST)
ಕಚ್ಚೆಹರುಕ ಪತಿಯ ವರ್ತನೆಯಿಂದ ಬೇಸತ್ತ ಮಹಿಳೆಯೊಬ್ಬಳು ಆತನ ಹತ್ಯೆಗೆ ಸ್ಕೇಚ್ ರೂಪಿಸಿ ಪೊಲೀಸರ ಅತಿಥಿಯಾದ ಘಟನೆ ವರದಿಯಾಗಿದೆ.
 
ಪುಲಕೇಶಿ ನಗರದ ನಿವಾಸಿಯಾಗಿದ್ದ ಕುಮಾರ್ ಮತ್ತು ಡೋರಿನ್ ದಂಪತಿಗಳು ಆರಂಭದಲ್ಲಿ ನೆಮ್ಮದಿಯಾಗಿಯೇ ಸುಖಿ ಜೀವನ ಸಾಗಿಸುತ್ತಿದ್ದರು. ಆದರೆ, ಪತಿಯ ವರ್ತನೆ ಕೆಲವೊಮ್ಮೆ ಡೋರಿನ್‌ಗೆ ಆಕ್ರೋಶ ತರಿಸುತ್ತಿತ್ತು ಎನ್ನಲಾಗಿದೆ.
 
ಪತಿ ಕುಮಾರ್ ಹಲವಾರು ಮಹಿಳೆಯರೊಂದಿಗೆ ಅನೈತಿಕ ಸಂಬಂಧ ಹೊಂದಿರುವುದು ಬಹಿರಂಗವಾದ ನಂತರ, ಆತನನ್ನು ಹಲವಾರು ಬಾರಿ ತಡೆಯಲು ಪ್ರಯತ್ನಿಸಿದರು ಯಾವುದೇ ಪ್ರಯೋಜನವಾಗಿರಲಿಲ್ಲ. ಸದಾ ಮುಂಗೋಪಿಯಾಗಿದ್ದ ಕುಮಾರ್, ಪತ್ನಿ ಮತ್ತು ಪುತ್ರಿಯ ಮೇಲೆ ದೈಹಿಕ ಹಲ್ಲೆ ಕೂಡಾ ನಡೆಸುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಪತಿಯ ಅನೈತಿಕ ಸಂಬಂಧದಿಂದ ಬೇಸತ್ತು ಆತನನ್ನು ಕೊನೆಗಾಣಿಸಬೇಕು ಎನ್ನುವ ಉದ್ದೇಶದಿಂದ ಡೋರಿನ್, ತನಗೆ ಪರಿಚಯವಿದ್ದವರಿಗೆ 30 ಲಕ್ಷ ರೂಪಾಯಿಗಳನ್ನು ನೀಡಿ ಹತ್ಯೆಗೈಯುವಂತೆ ಪ್ರೇರೇಪಿಸಿದ್ದಾಳೆ.
 
ಏಪ್ರಿಲ್ 6 ರಂದು ಪತಿ ಕುಮಾರ್ ಮನೆಗೆ ಮರಳುತ್ತಿರುವ ಸಂದರ್ಭದಲ್ಲಿ ಕೆಲ ದುಷ್ಕರ್ಮಿಗಳು ಆತನ ಮೇಲೆ ಹಲ್ಲೆ ನಡೆಸಿ ಹತ್ಯೆಗೈದಿದ್ದರು. ಪೊಲೀಸರು ಪ್ರಕರಣದ ತನಿಖೆ ನಡೆಸಿದಾಗ ಸತ್ಯ ಸಂಗತಿ ಹೊರಬಂದಿತ್ತು.
 
ಪತ್ನಿ ಡೋರಿನ್ ಆರೋಪಿಗಳಿಗೆ ಹಣ ನೀಡಿ ಹತ್ಯೆಗೆ ಪ್ರಚೋದಿಸಿರುವುದು ತನಿಖೆಯಲ್ಲಿ ಕಂಡುಬಂದಿತ್ತು. ಇದೀಗ ಆರೋಪಿಗಳಾದ ಅವಿನಾಶ್, ಶ್ರೀಧರ್, ದಿನೇಶ್, ಪ್ಯಾಟ್ರಿಕ್‌ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.   

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜಯಭೇರಿ ಖಚಿತ: ಜಿ.ಪರಮೇಶ್ವರ್