Select Your Language

Notifications

webdunia
webdunia
webdunia
webdunia

ಉಪಚುನಾವಣಾ ಫಲಿತಾಂಶ: ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ

ಉಪಚುನಾವಣಾ ಫಲಿತಾಂಶ: ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ
ಮೈಸೂರು , ಗುರುವಾರ, 13 ಏಪ್ರಿಲ್ 2017 (08:15 IST)
ಪ್ರತಿಷ್ಠೆಯ ಕಣವಾಗಿದ್ದ ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ.
 ಮತ ಎಣಿಕೆಯ ಪ್ರತೀ ಹಂತದಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಮುನ್ನಡೆ ಕಾಯ್ದುಕೊಂಡರು. ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ದಿವಂಗತ ಎಚ್.ಎಸ್. ಮಹದೇವ ಪ್ರಸಾದ್ ಪತ್ನಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹದೇವಪ್ರಸಾದ್, ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ನಿರಂಜನ್ ಕುಮಾರ್ ವಿರುದ್ಧ 10,877 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. ಇತ್ತ ನಂಜನಗೂಡಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿ ತಮ್ಮ ಪ್ರತಿ ಸ್ಪರ್ಧಿ ವಿ. ಶ್ರೀನಿವಾಸಪ್ರಸಾದ್ ವಿರುದ್ಧ 21, 334 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

                  ನಂಜನಗೂಡು

* ಕಾಂಗ್ರೆಸ್   (ಕಳಲೆ ಕೇಶವಮೂರ್ತಿ)     - 86,212 ಮತ
* ಬಿಜೆಪಿ     (ವಿ. ಶ್ರೀನಿವಾಸ ಪ್ರಸಾದ್)   -  64,8
78 ಮತ
* ಅಂತರ                                       -  21, 334 ಮತ

                         ಗುಂಡ್ಲುಪೇಟೆ

* ಕಾಂಗ್ರೆಸ್ (ಗೀತಾ ಮಹದೇವ ಪ್ರಸಾದ್)  -  90,258 ಮತ
* ಬಿಜೆಪಿ       (ನಿರಂಜನ್ ಕುಮಾರ್)        -  79,381 ಮತ
* ಅಂತರ                                         -   10,877 ಮತ


 * ಮಧ್ಯಾಹ್ನ 12.40: ನಂಜನಗೂಡಿನಲ್ಲಿ ಕೇಶವಮೂರ್ತಿಗೆ  21, 334 ಮತಗಳ ಅಂತರದ ಜಯ 
 * ಮಧ್ಯಾಹ್ನ 12.18:  ಗುಂಡ್ಲುಪೇಟೆಯಲ್ಲಿ  ಗೀತಾ ಮಹದೇವಪ್ರಸಾದ್`ಗೆ 10,877 ಮತಗಳ ಅಂತರದ ಜಯ
 * ಮಧ್ಯಾಹ್ನ 12.18: 15ನೇ ಸುತ್ತಿನ ಬಳಿಕ ಕೇಶವಮೂರ್ತಿಗೆ 19, 228 ಮತಗಳ ಭಾರೀ ಮುನ್ನಡೆ
 * ಬೆಳಗ್ಗೆ 11.55: 14ನೇ ಸುತ್ತಿನ ಬಳಿಕ ಕೇಶವಮೂರ್ತಿಗೆ 18, 169 ಮತಗಳ ಭಾರೀ ಮುನ್ನಡೆ
ಬೆಳಗ್ಗೆ 11.40: ಕೇಶವಮೂರ್ತಿಗೆ 18, 307 ಮತ, ಗೀತಾ ಮಹದೇವಪ್ರಸಾದ್ 11,254  ಮತಗಳ ಮುನ್ನಡೆ
ಬೆಳಗ್ಗೆ 11.40: ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಜಯಭೇರಿ, ಅಧಿಕೃತ ಘೋಷಣೆ ಬಾಕಿ
ಬೆಳಗ್ಗೆ 11.20:  ಗುಂಡ್ಲುಪೇಟೆಯಲ್ಲಿ 12ನೇ ಸುತ್ತಿನಲ್ಲೂ ಗೀತಾ ಮಹದೇವಪ್ರಸಾದ್`ಗೆ 9,878 ಮತಗಳ ಮುನ್ನಡೆ
ಬೆಳಗ್ಗೆ 11.20:  10ನೇ ಸುತ್ತಿನ ಬಳಿಕ ಕೇಶವಮೂರ್ತಿಗೆ 16, 316 ಮತಗಳ ಭಾರೀ ಮುನ್ನಡೆ
* ಬೆಳಗ್ಗೆ 11.00: ಎಲ್ಲ ಸುತ್ತುಗಳಲ್ಲೂ ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್ ಅಭ್ಯರ್ಥಿಗಳು
* ಬೆಳಗ್ಗೆ 11.00: ಬಿಜೆಪಿ ಅಭ್ಯರ್ಥಿಗಳಾದ ಶ್ರೀನಿವಾಸ್ ಪ್ರಸಾದ್ ನಿರಂಜನ್ ಕುಮಾರ್`ಗೆ ಭಾರೀ ಹಿನ್ನಡೆ
ಬೆಳಗ್ಗೆ 11.00:  9ನೇ ಸುತ್ತಿನ ಬಳಿಕ ಕೇಶವಮೂರ್ತಿಗೆ 17, 416 ಮತಗಳ ಭಾರೀ ಮುನ್ನಡೆ
ಬೆಳಗ್ಗೆ 10.48:  ಗುಂಡ್ಲುಪೇಟೆಯಲ್ಲಿ 11ನೇ ಸುತ್ತಿನಲ್ಲೂ ಗೀತಾ ಮಹದೇವಪ್ರಸಾದ್`ಗೆ 6,066 ಮತಗಳ ಮುನ್ನಡೆ
ಬೆಳಗ್ಗೆ 10.42:  8ನೇ ಸುತ್ತಿನ ಬಳಿಕ ಕೇಶವಮೂರ್ತಿಗೆ 15, 709 ಮತಗಳ ಭಾರೀ ಮುನ್ನಡೆ
ಬೆಳಗ್ಗೆ 10.19:  7ನೇ ಸುತ್ತಿನ ಬಳಿಕ ಕೇಶವಮೂರ್ತಿಗೆ 15, 896 ಮತಗಳ ಭಾರೀ ಮುನ್ನಡೆ
ಬೆಳಗ್ಗೆ 10.19:  ಗುಂಡ್ಲುಪೇಟೆಯಲ್ಲಿ 9ನೇ ಸುತ್ತಿನಲ್ಲೂ ಗೀತಾ ಮಹದೇವಪ್ರಸಾದ್`ಗೆ 4,650 ಮತಗಳ ಮುನ್ನಡೆ
ಬೆಳಗ್ಗೆ 10.02:  6 ನೇ ಸುತ್ತಿನ ಬಳಿಕ ಕೇಶವಮೂರ್ತಿಗೆ  15, 585 ಮತಗಳ ಭಾರೀ ಮುನ್ನಡೆ
ಬೆಳಗ್ಗೆ 10.02:  ಗುಂಡ್ಲುಪೇಟೆಯಲ್ಲಿ 7ನೇ ಸುತ್ತಿನಲ್ಲೂ ಗೀತಾ ಮಹದೇವಪ್ರಸಾದ್`ಗೆ 3,078 ಮತಗಳ ಮುನ್ನಡೆ
ಬೆಳಗ್ಗೆ 9.50:  ಕಾಂಗ್ರೆಸ್`ನ ಕೇಶವಮೂರ್ತಿಗೆ 12,927, ಗೀತಾ ಮಹದೇವಪ್ರಸಾದ್`ಗೆ 3,362 ಮತಗಳ ಮುನ್ನಡೆ
ಬೆಳಗ್ಗೆ 9.50:  5ನೇ ಸುತ್ತಿನ ಮತ ಎಣಿಕೆ ಬಳಿಕ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ
ಬೆಳಗ್ಗೆ 9.35: ಕೇಶವಮೂರ್ತಿಗೆ 9,233 ಮತ, ಗೀತಾ ಮಹದೇವಪ್ರಸಾದ್ 3,528 ಮತಗಳ ಮುನ್ನಡೆ
ಬೆಳಗ್ಗೆ 9.25:  4 ನೇ ಹಂತದ ಮತ ಎಣಿಕೆ ಬಳಿಕವೂ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮುನ್ನಡೆ
ಬೆಳಗ್ಗೆ 9.00: 3ನೇ ಹಂತದ ಮತ ಎಣಿಕೆ ಬಳಿಕವೂ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮುನ್ನಡೆ
ಬೆಳಗ್ಗೆ 9.00: ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹದೇವಪ್ರಸಾದ್`ಗೆ 2399 ಮತಗಳ ಮುನ್ನಡೆ
ಬೆಳಗ್ಗೆ 9.00: ನಂಜನಗೂಡಿನಲ್ಲಿ ಕಳಲೆ ಕೇಶವಮೂರ್ತಿ 4712 ಮತಗಳ ಮುನ್ನಡೆ
ಬೆಳಗ್ಗೆ 9.00: 2ನೇ ಹಂತದ ಮತ ಎಣಿಕೆಯಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮುನ್ನಡೆ 
ಬೆಳಗ್ಗೆ 8.42: ಎರಡೂ ಕ್ಷೇತ್ರಗಳಲ್ಲಿ ಮೊದಲ ಹಂತದ ಮತ ಎಣಿಕೆ ಮುಕ್ತಾಯ
* ಬೆಳಗ್ಗೆ 8.42: ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹದೇವಪ್ರಸಾದ್`ಗೆ 1771 ಮತಗಳ ಮುನ್ನಡೆ
* ಬೆಳಗ್ಗೆ 8.30: ನಂಜನಗೂಡಿನಲ್ಲಿ ಕಳಲೆ ಕೇಶವಮೂರ್ತಿ 2,101 ಮತಗಳ ಮುನ್ನಡೆ
* ಬೆಳಗ್ಗೆ 8.15: ಗುಂಡ್ಲುಪೇಟೆಯಲ್ಲಿ ಅಂಚೆ ಮತ ಎಣಿಕೆ ಆರಂಭ
* ಬೆಳಗ್ಗೆ 8.15: ನಂಜನಗೂಡಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿ 500 ಮತಗಳಿಂದ ಮುನ್ನಡೆ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಉಪಚುನಾವಣೆಯಲ್ಲಿ ಯಾವ ಪಕ್ಷ ಗೆದ್ದರೆ ಏನಾಗುತ್ತೆ..? ಇಲ್ಲಿದೆ ಸರಳ ವಿಶ್ಲೇಷಣೆ