Select Your Language

Notifications

webdunia
webdunia
webdunia
webdunia

ನಾಗೇಂದ್ರ ರಾಜೀನಾಮೆ ಕೊಡದಿದ್ರೆ ಸದನ ಮುಗಿನದ ನಂತರವೂ ಹೋರಾಟ ಮಾಡ್ತೀವಿ: ವಿಜಯೇಂದ್ರ

BJP protest
ಬೆಂಗಳೂರು: ಭ್ರಷ್ಟ ಸಚಿವ ನಾಗೇಂದ್ರರ ರಾಜೀನಾಮೆ ವಿಚಾರದಲ್ಲಿ ಸರಕಾರದ ಮೊಂಡುತನವನ್ನು ಗಮನಿಸಿದರೆ ಈ ಸರಕಾರ ಮತ್ತು ಕಾಂಗ್ರೆಸ್ ಪಕ್ಷ ಇರುವುದೇ ಭ್ರಷ್ಟರಿಂದ, ಭ್ರಷ್ಟರಿಗಾಗಿ ಎಂಬುದು ಸಾಬೀತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ.
 
ಬಿ. ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಶಾಸಕರ ಭವನದ ಮಹರ್ಷಿ ವಾಲ್ಮೀಕಿ ಪ್ರತಿಮೆ ಬಳಿ ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆಯ ವಿಪಕ್ಷ ನಾಯಕ ಆರ್. ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ನೇತೃತ್ವದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸದನ ಮುಗಿದ ನಂತರವೂ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಪ್ರಕಟಿಸಿದರು. ಜನರಿಂದ, ಜನರಿಗಾಗಿ, ಜನರಿಗೋಸ್ಕರ ಇರುವ ಕಾಂಗ್ರೆಸ್ ಸರಕಾರ ಇದಲ್ಲ ಎಂದು ಟೀಕಿಸಿದರು.
 
ಭ್ರಷ್ಟಚಾರಿಗಳನ್ನು ರಕ್ಷಣೆ ಮಾಡಲು ಭ್ರಷ್ಟರಿಂದ, ಭ್ರಷ್ಟಾಚಾರಕ್ಕೋಸ್ಕರ ಇರುವ ಸರಕಾರ ಇದಾಗಿದೆ ಎಂದು ಆರೋಪಿಸಿದರು. ದಲಿತರ ಬಗ್ಗೆ ನಾಗೇಂದ್ರ ಮತ್ತು ಕಾಂಗ್ರೆಸ್ ಸರಕಾರ ಮೊಸಳೆಕಣ್ಣೀರು ಹಾಕುತ್ತಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಲೂಟಿ ಮಾಡುವ ವೇಳೆ ನಿಮ್ಮ ದಲಿತಪರ ಕಾಳಜಿ ಎಲ್ಲಿ ಹೋಗಿತ್ತು ಎಂದು ಕೇಳಿದರು. 
 
ಹಣ ಲೂಟಿ ಮಾಡುವ ವೇಳೆ ರಾಹುಲ್ ಗಾಂಧಿ, ಕೆ.ಸಿ.ವೇಣುಗೋಪಾಲ್, ಡಿ.ಕೆ.ಶಿವಕುಮಾರರಿಗೆ ಅದು ದಲಿತರ ಹಣ ಎಂದು ನೆನಪಾಗಲಿಲ್ಲವೇ? ನಮ್ಮ ಮೇಲೆ ದಲಿತರನ್ನು ಟಾರ್ಗೆಟ್ ಮಾಡುವ ಆರೋಪ ಮಾಡುತ್ತಿದ್ದೀರಲ್ಲವೇ? ನಿಮಗೆ, ಕಾಂಗ್ರೆಸ್ ಸರಕಾರಕ್ಕೆ ನಾಚಿಕೆ, ಮಾನ ಮರ್ಯಾದೆ ಇದ್ದರೆ ಈ ಸಬೂಬನ್ನು ಕೊಡುವುದನ್ನು ಬಿಟ್ಟು ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ಹಣ ಲೂಟಿ ಮಾಡಿದ ನಾಗೇಂದ್ರರನ್ನು ಸಚಿವ ಸಂಪುಟದಿಂದ ಕೈಬಿಡಿ ಎಂದು ಆಗ್ರಹಿಸಿದರು.
 
ಸಿದ್ದರಾಮಯ್ಯನವರು ಸಚಿವ ಸ್ಥಾನದಿಂದ ಕೈಬಿಟ್ಟ ನಾಗೇಂದ್ರರನ್ನು ವಾಪಸ್ ಸಚಿವರನ್ನಾಗಿ ಮಾಡಲು ಏನು ಬದಲಾವಣೆ ಆಗಿದೆ? ಅವರ ಬಗ್ಗೆ ಇ.ಡಿ. ಕ್ಲೀನ್ ಚಿಟ್ ನೀಡಿದ್ದಾರಾ ಎಂದು ಡಿ.ಕೆ.ಶಿವಕುಮಾರರನ್ನು ಪ್ರಶ್ನಿಸಿದರು. ತನಿಖೆ ಈಗಲೂ ನಡೆಯುತ್ತಿದೆ. ಅವರನ್ನು ಸಚಿವ ಸಂಪುಟಕ್ಕೆ ತೆಗೆದುಕೊಂಡು ರಾಜ್ಯದ ದಲಿತ ಸಮುದಾಯಕ್ಕೆ ಮೋಸ ಮಾಡಿದ್ದಾರೆ ಎಂದು ದೂರಿದರು.
ಬರ, ಕೆಪಿಎಸ್ಸಿ ಹಗರಣ ಮತ್ತಿತರ ಜ್ವಲಂತ ಸಮಸ್ಯೆಗಳ ಬಗ್ಗೆ ಸದನದಲ್ಲಿ ಚರ್ಚೆಗೆ ಅವಕಾಶ ಮಾಡಿಕೊಡುವ ದೃಷ್ಟಿಯಿಂದ ಮುಖ್ಯಮಂತ್ರಿಗಳು ನಾಗೇಂದ್ರರನ್ನು ಸಚಿÀವ ಸಂಪುಟದಿಂದ ಕೈಬಿಡಬೇಕು ಎಂದು ತಿಳಿಸಿದರು. ರಾಜ್ಯದ ಜನರು ಸರಕಾರ ಭ್ರಷ್ಟತನ ಸೇರಿ ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದು ಎಚ್ಚರಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಫೈಟ್ ಜೋರು: ಕಪ್ಪು ಟಿಶರ್ಟ್ ಧರಿಸಿ ವಿಧಾನಸೌಧಕ್ಕೆ ನುಗ್ಗಲು ಯತ್ನ Video