Select Your Language

Notifications

webdunia
webdunia
webdunia
webdunia

ಉಪಚುನಾವಣೆಯ ರಿಸಲ್ಟ್‌ ಸಂಘಟನೆಯ ಮೇಲೆ ಪ್ರಭಾವ ಬೀರುವುದಿಲ್ಲ: ಬಿ.ವೈ ವಿಜಯೇಂದ್ರ

Karnataka By Election Result, BJP President BY Vijayendra, BJP Karnataka Workers,

Sampriya

ಬೆಂಗಳೂರು , ಮಂಗಳವಾರ, 26 ನವೆಂಬರ್ 2024 (17:09 IST)
ಬೆಂಗಳೂರು:  ಕರ್ನಾಟಕದಲ್ಲಿ ನಡೆದ ಮೂರು ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶವು ಪಕ್ಷದ ಸಂಘಟನೆಯ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ. ಇದನ್ನು ಸಂಪೂರ್ಣವಾಗಿ ಉಪೇಕ್ಷಿಸೋಣ ಎಂದು ಬಿಜೆಪಿ ರಾಜ್ಯ ಘಟಕದ ಆಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.

ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಸಾಮಾಜಿಕ ಜಾಲತಾಣದಲ್ಲಿ ಪತ್ರ ಬರೆದಿರುವ ಅವರು, ಉಪಚುನಾವಣೆಯ ಈ ಸೋಲನ್ನು ನಾವು ಸಕಾರಾತ್ಮಕವಾಗಿಯೇ ಸ್ವೀಕರಿಸೋಣ. ಈ ಫಲಿತಾಂಶ ಭವಿಷ್ಯದಲ್ಲಿ ಎದುರಾಗಲಿರುವ ಸವಾಲುಗಳನ್ನು ಎಚ್ಚರಿಸುವ ಸಂಕೇತವೂ ಆಗಿದೆ ಎಂದು ಭಾವಿಸೋಣ ಎಂದಿದ್ದಾರೆ.

ಪಕ್ಷದಲ್ಲಿ ಹಿರಿಯರ ಆಶೀರ್ವಾದ ಮತ್ತು ಪ್ರಮುಖರ ಮಾರ್ಗದರ್ಶನ ಪಡೆದು ಮುಂದಿನ ದಿನಗಳಲ್ಲಿ ಇನ್ನಷ್ಟು ಕ್ರಿಯಾಶೀಲರಾಗಿ ಸಂಘಟನೆ ಬಲಗೊಳಿಸಬೇಕಾಗಿದೆ.  ಒಂದು ದಿನವೂ ವ್ಯರ್ಥ ಮಾಡದೇ ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರ ತರುವ ನಿಟ್ಟಿನಲ್ಲಿ ಸಂಕಲ್ಪ ಮಾಡಬೇಕಾಗಿದೆ. ಉಪಚುನಾವಣೆ ಫಲಿತಾಂಶಗಳು ಪಕ್ಷದ ಸಂಘಟನೆಯ ಸಾಮರ್ಥ್ಯ ಮತ್ತು ಪ್ರಭಾವವನ್ನು ಬಿಂಬಿಸುವ ಅಳತೆಗೋಲಾಗಿರುವುದಿಲ್ಲ. ಸ್ಥಳೀಯ ಸಮಸ್ಯೆಗಳು ಹಾಗೂ ಸರ್ಕಾರದ ಪ್ರಭಾವವನ್ನುಆಧರಿಸಿ ಚುನಾವಣೆ ಫಲಿತಾಂಶಗಳು ಹೊರಹೊಮ್ಮುತ್ತವೆ ಎಂದು ವಿವರಿಸಿದ್ದಾರೆ.

ಬಿಜೆಪಿ ಸುಭದ್ರ ಕೋಟೆಯ ನಡುವೆ ಬಿರುಕು ಮೂಡಿಸಲು ಯತ್ನಿಸುವ ಶಕ್ತಿಗಳನ್ನು ಮೆಟ್ಟಿ ನಿಂತು ನಮ್ಮೆಲ್ಲರ ಒಗ್ಗಟ್ಟಿನ ಮುಷ್ಠಿ ದೇಶ ಕಟ್ಟುವ ಶಕ್ತಿಯಾಗಬೇಕಿದೆ. ಮುಂದೆಯೂ ಮಿತ್ರಪಕ್ಷ ಜೆಡಿಎಸ್‌ ಜತೆ ಸಹಕಾರದ ಹೆಜ್ಜೆಗಳನ್ನು ಇಡೋಣ. ಕಾಂಗ್ರೆಸ್‌ ಸರ್ಕಾರದ ಜನ ವಿರೋಧಿ ಧೋರಣೆ ಮತ್ತು ಭ್ರಷ್ಟ ಆಡಳಿತವನ್ನು ಕೊನೆಗಾಣಿಸುವುದಕ್ಕಾಗಿ ಎಂಬ ಶಪಥ ಮಾಡೋಣ ಎಂದು ವಿಜಯೇಂದ್ರ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಸಮಾಜ ಒಡೆಯುತ್ತದೆ, ಕಾಂಗ್ರೆಸ್ ಒಂದುಗೂಡಿಸುತ್ತದೆ: ಡಿಸಿಎಂ ಡಿ.ಕೆ.ಶಿವಕುಮಾರ್