Select Your Language

Notifications

webdunia
webdunia
webdunia
webdunia

ಉದ್ಯಮಿ ಬಸವರಾಜ ಅಂಬಿ ಕಿಡ್ನ್ಯಾಪ್ ಪ್ರಕರಣ: ಸಚಿವ ಸತೀಶ್ ಜಾರಕಿಹೊಳಿ ಆಪ್ತೆ ಮಂಜುಳಾ ಪ್ರಮುಖ ಸೂತ್ರಧಾರೆ

ಉದ್ಯಮಿ ಬಸವರಾಜ ಅಂಬಿ ಕಿಡ್ನ್ಯಾಪ್ ಪ್ರಕರಣ: ಸಚಿವ ಸತೀಶ್ ಜಾರಕಿಹೊಳಿ ಆಪ್ತೆ ಮಂಜುಳಾ ಪ್ರಮುಖ ಸೂತ್ರಧಾರೆ

Sampriya

ಬೆಳಗಾವಿ , ಸೋಮವಾರ, 3 ಮಾರ್ಚ್ 2025 (15:33 IST)
Photo Courtesy X
ಬೆಳಗಾವಿ: ಮೂಡಲಗಿ ತಾಲ್ಲೂಕಿನ ರಾಜಾಪುರ ಗ್ರಾಮದ ರಿಯಲ್ ಎಸ್ಟೇಟ್ ಉದ್ಯಮಿ ಬಸವರಾಜ ಅಂಬಿ ಅವರನ್ನು ಕಿಡ್ನ್ಯಾಪ್ ಮಾಡಿ  ₹5 ಕೋಟಿಗೆ ಬೇಡಿಕೆಯಿಟ್ಟ ಪ್ರಕರಣ ಸಂಬಂಧ ಗೋಕಾಕ ತಾಲ್ಲೂಕಿನ ಕೊಣ್ಣೂರಿನ ಮಂಜುಳಾ ರಾಮನಗಟ್ಟಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಪ್ರಮುಖ ಆರೋಪಿ ಮಂಜುಳಾ, ಸಚಿವ ಸತೀಶ್ ಜಾರಕಿಹೊಳಿ ಆಪ್ತೆಯಾಗಿದ್ದು, ಕಾಂಗ್ರೆಸ್ ಪಕ್ಷದಲ್ಲಿ ಅವರು ಗುರುತಿಸಿಕೊಂಡಿದ್ದಾರೆ.

ಇನ್ನೂ ಈ ಅಪಹರಣ ಪ್ರಕರಣದಲ್ಲಿ ಮಂಜುಳಾ ಅವರದ್ದು ಪ್ರಮುಖ ಪಾತ್ರವಿರುವುದು ತಿಳಿದುಬಂದಿದೆ. ರಾಜಕೀಯ ಪಕ್ಷ ಮತ್ತು ಸಂಘಟನೆಯೊಂದಿಗೆ ಮಹಿಳೆ ಗುರುತಿಸಿಕೊಂಡಿದ್ದಾರೆ. ಇನ್ನೂ ಈ ಹಿಂದೆ ತಹಶೀಲ್ದಾರ್‌ ಕಚೇರಿಯಲ್ಲಿ 'ಡಿ' ದರ್ಜೆ ನೌಕರಿ ಮತ್ತು ಹೊರಗುತ್ತಿಗೆ ನೌಕರಿ ಕೊಡಿಸುವುದಾಗಿ ಇಬ್ಬರಿಂದ ತಲಾ ₹2.5 ಲಕ್ಷ ಲಂಚ ಪಡೆದ ಸಂಬಂಧ ಕುಲಗೋಡ ಠಾಣೆಯಲ್ಲಿ ದೂರು ದಾಖಲಾಗಿದೆ.

ಇನ್ನೂ ಕಿಡ್ನ್ಯಾಪ್ ಪ್ರಕರಣ ಸಂಬಂಧ ಮಂಜುಳಾ ಜತೆಗೆ, ಯಲ್ಲೇಶ ವಾಲಿಕಾರ, ಪರಶುರಾಮ ಕಾಂಬಳೆಯನ್ನು ಅರೆಸ್ಟ್ ಮಾಡಿ ವಿಚಾರಣೆ ನಡೆಸಲಾಗುತ್ತಿದೆ.

ಇನ್ನೂ ಕಿಡ್ನ್ಯಾಪ್ ಪ್ರಕರಣ ಸೂತ್ರಧಾರೆ ಮಂಜುಳಾ ಆಗಿದ್ದು, ಬಸವರಾಜ ಅಂಬಿ ಅಪಹರಣಕ್ಕಾಗಿ  ಸಹಕರಿಸಿದ ಆರೋಪಿಗಳಿಗೂ ಹಣ ಕೊಡುವುದಾಗಿ ತಿಳಿಸಿದ್ದರು.

ಮಂಜುಳಾ ಪುತ್ರ ಈಶ್ವರನನ್ನು ಈಗಾಗಲೇ ಬಂಧಿಸಿದ್ದೆವು. ಹಣ ಮಾಡಬೇಕು, ಐಷಾರಾಮಿಯಾಗಿ ಬದುಕು ಸಾಗಿಸಬೇಕೆಂಬ ಆಸೆಯಿಂದ ಈ ಅಪಹರಣ ಮಾಡಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಬಸವರಾಜ ಬಳಿ ಆರೋಪಿಗಳು ಕಸಿದುಕೊಂಡಿದ್ದ ₹3 ಲಕ್ಷ ಮೌಲ್ಯದ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ 6 ಮೊಬೈಲ್‌, ನಾಲ್ಕು ಕಾರು ಮತ್ತಿತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಚಿವ ಸತೀಶ ಜಾರಕಿಹೊಳಿ, ಪ್ರಿಯಾಂಕಾ ಜಾರಕಿಹೊಳಿ ಅವರೊಂದಿಗೆ ಈ ಮಹಿಳೆ ಕ್ಲಿಕ್ಕಿಸಿಕೊಂಡ ಫೋಟೊಗಳೂ ವೈರಲ್ ಆಗಿದೆ.

'ಆರೋಪಿ ಕಾಂಗ್ರೆಸ್ ಕಾರ್ಯಕರ್ತೆ ಅಲ್ಲ'

'ಅಪಹರಣ ಪ್ರಕರಣದಲ್ಲಿ ಭಾಗಿಯಾಗಿರುವ ಮಂಜುಳಾ ರಾಮನಗಟ್ಟಿ ಕಾಂಗ್ರೆಸ್ ಕಾರ್ಯಕರ್ತೆ ಅಲ್ಲ. ಅವರಿಗೆ ಪಕ್ಷದ ಯಾವುದೇ ಹುದ್ದೆ ಅಥವಾ ಸದಸ್ಯತ್ವ ಕೊಟ್ಟಿಲ್ಲ' ಎಂದು ಕಾಂಗ್ರೆಸ್ ಬೆಳಗಾವಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಕಲ್ಪನಾ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರೋಹಿತ್ ಶರ್ಮಾ ದಪ್ಪ ಎಂದಿದ್ದ ವಕ್ತಾರೆ ಶಮಾ ಹೇಳಿಕೆಯಿಂದ ಕಾಂಗ್ರೆಸ್ ಗೇ ಶೇಮ್