Select Your Language

Notifications

webdunia
webdunia
webdunia
webdunia

ಗ್ಯಾರಂಟಿ ಬರಾಟೆ, ಡೀಸೆಲ್ ಗೆ ದುಡ್ಡಿಲ್ಲ ಎಂದು ಬಸ್ ಗಳ ಸಂಖ್ಯೆ ಕಡಿತವಾಗಿದೆಯೇ: ಬಿಜೆಪಿ

KSRTC

Krishnaveni K

ಬೆಂಗಳೂರು , ಬುಧವಾರ, 20 ನವೆಂಬರ್ 2024 (15:09 IST)
ಬೆಂಗಳೂರು: ರಾಜ್ಯ ಸರ್ಕಾರ ನೀಡಿರುವ ಗ್ಯಾರಂಟಿಗಳಲ್ಲಿ ಒಂದಾಗಿರುವ ಶಕ್ತಿ ಯೋಜನೆ ಫಲವಾಗಿ ಬಸ್ ಗಳಿಗೆ ಡೀಸೆಲ್ ಹಾಕಲೂ ದುಡ್ಡಿಲ್ಲದೇ ಹಲವು ಬಸ್ ಕಡಿತ ಮಾಡಲಾಗಿದೆಯೇ ಎಂದು ರಾಜ್ಯ ಬಿಜೆಪಿ ಪ್ರಶ್ನೆ ಮಾಡಿದೆ.

ಕರ್ನಾಟಕ ಸರ್ಕಾರ ಐದು ಗ್ಯಾರಂಟಿಗಳನ್ನು ನೀಡುತ್ತಿದೆ. ಅದರಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆಯೂ ಒಂದು. ಉಚಿತ ಕೊಟ್ಟರೂ ಸಾರಿಗೆ ಇಲಾಖೆ ಲಾಭದಲ್ಲೇ ಇದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳುತ್ತಲೇ ಇದ್ದಾರೆ. ಆದರೆ ಇತ್ತೀಚೆಗೆ ಹಲವು ಕಡೆ ಬಸ್ ಗಳ ಸಂಖ್ಯೆ ಕಡಿಮೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಚಿಕ್ಕಮಗಳೂರಿನಲ್ಲಿ ಬಸ್ ಕಡಿತಗೊಳಿಸಿದ್ದಕ್ಕೆ ಸಾರ್ವಜನಿಕರು ಬಸ್ ಚಾಲಕ, ನಿರ್ವಾಹಕರನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವ ವಿಡಿಯೋವೊಂದನ್ನು ಹಂಚಿಕೊಂಡಿರುವ ರಾಜ್ಯ ಬಿಜೆಪಿ ದಿನನಿತ್ಯ ಓಡಾಡಲೂ ಬಸ್ ಇಲ್ಲದ ಪರಿಸ್ಥಿತಿಯಾಗಿದೆ. ಡೀಸೆಲ್ ಗೆ ದುಡ್ಡಿಲ್ಲದೇ ಬಸ್ ಗಳನ್ನು ಕಡಿತ ಮಾಡಲಾಗಿದೆ ಎಂದು ಟೀಕಿಸಿದೆ.

ರಾಜ್ಯಾದ್ಯಂತ ವಿದ್ಯಾರ್ಥಿಗಳು, ಸಾರ್ವನಿಕರು ಪ್ರಯಾಣಿಸಲು ಕೆಎಸ್ ಆರ್ ಟಿಸಿ ಬಸ್ಸುಗಳು ಇಲ್ಲವೆಂದು ದಿನನಿತ್ಯ ಗೋಳಾಡುತ್ತಿದ್ದಾರೆ. ಸಚಿವ ರಾಮಲಿಂಗಾರೆಡ್ಡಿವಯರೇ ಸಾರಿಗೆ ಸಂಸ್ಥೆ ಲಾಭದಲ್ಲಿ ಇದೆ ಎಂದ ಮೇಲೆ ರೂಟ್ ಮೇಲೆ ಕಡಿಮೆ ಬಸ್ ಗಳು ಏಕೆ ಓಡಾಡುತ್ತಿವೆ? ಡಿಪೋದಲ್ಲಿ ನಿಂತಿರುವ ಬಸ್ಸುಗಳಿಗೆ ಡೀಸೆಲ್ ಹಾಕಲು ಸರ್ಕಾರದ ಬಳಿ ದುಡ್ಡಿಲ್ಲವೇ? ಎಂದು ಬಿಜೆಪಿ ಲೇವಡಿ ಮಾಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಕ್ರಂ ಗೌಡ ಎನ್‌ಕೌಂಟರ್‌ ಬಗ್ಗೆ ಯಾವುದೇ ಅನುಮಾನ ಅಗತ್ಯವಿಲ್ಲ: ಗೃಹ ಸಚಿವ ಪರಮೇಶ್ವರ್‌