Select Your Language

Notifications

webdunia
webdunia
webdunia
webdunia

ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಬಸ್: 30 ಮಂದಿಗೆ ಗಾಯ

bus lost cotrol
ಗದಗ್: , ಭಾನುವಾರ, 8 ಮೇ 2016 (15:39 IST)
ಗದಗ್ ಜಿಲ್ಲೆಯಲ್ಲಿ ಆಂಧ್ರದಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಪಲ್ಟಿಯಾಗಿ 30ಕ್ಕೂ ಅಧಿಕ ಮಂದಿಗೆ ತೀವ್ರ ಗಾಯಗಳಾಗಿವೆ. 30 ಮಂದಿಯ ಪೈಕಿ ಏಳು ಮಂದಿಯ ಸ್ಥಿತಿ ಗಂಭೀರವಾಗಿದೆ. ಗದಗ ಜಿಲ್ಲೆಯ ಹುಲಕೋಟಿ ಬಳಿ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆಯಿತೆಂದು ಗೊತ್ತಾಗಿದೆ.

ರಸ್ತೆಯಿಂದ ಉರುಳಿ ಪಕ್ಕದ ಕಂದಕಕ್ಕೆ ಬಸ್ ಬಿದ್ದಿದ್ದರಿಂದ ಈ ಘಟನೆ ಸಂಭವಿಸಿದೆ. ಈ ಅಪಘಾತಕ್ಕೆ ಚಾಲಕನ ನಿರ್ಲಕ್ಷ್ಯವೇ ಕಾರಣವೆಂದು ಹೇಳಲಾಗುತ್ತಿದೆ.

ತಿರುವಿನಲ್ಲಿ ವೇಗವಾಗಿ ಬಸ್ ಚಾಲನೆ ಮಾಡಿದ್ದೇ ಬಸ್ ಪಲ್ಟಿ ಹೊಡೆಯಲು ಕಾರಣವೆಂದು ಪೊಲೀಸರು ತಿಳಿಸಿದ್ದಾರೆ. ಗಾಯಾಳುಗಳನ್ನು ಗದಗ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ. ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಕೈಕೊಟ್ಟ ಸರ್ವರ್‌ನಿಂದ ಕಾಮೆಡ್ ಕೆ ಪರೀಕ್ಷೆ ವಿಳಂಬ: ಮೇಲ್ವಿಚಾರಕನ ಧಮ್ಕಿ