Select Your Language

Notifications

webdunia
webdunia
webdunia
webdunia

ನರ್ಮದಾ ನದಿಗೆ ಬಿದ್ದ ಬಸ್; 13 ಸಾವು

ನರ್ಮದಾ ನದಿಗೆ ಬಿದ್ದ ಬಸ್; 13 ಸಾವು
ಮಧ್ಯಪ್ರದೇಶ , ಸೋಮವಾರ, 18 ಜುಲೈ 2022 (19:06 IST)
ಮಧ್ಯಪ್ರದೇಶದ ಧಾರ್​ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಇಂದೋರ್​ನಿಂದ ಪುಣೆಗೆ ಹೋಗುತ್ತಿದ್ದ ಬಸ್​ವೊಂದು ಇಂದು ಬೆಳಗ್ಗೆ ಸೇತುವೆಯಿಂದ ನರ್ಮದಾ ನದಿಗೆ ಬಿದ್ದಿದ್ದು, 13 ಮಂದಿ ಸಾವನ್ನಪ್ಪಿದ್ದಾರೆ. 40ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಈಗಾಗಲೇ 13 ಮೃತದೇಹಗಳನ್ನು ನದಿಯಿಂದ ಹೊರತೆಗೆಯಲಾಗಿದೆ. ನರ್ಮದಾ ನದಿಯಲ್ಲಿ ಸಂಪೂರ್ಣವಾಗಿ ಮುಳುಗಿರುವ ಬಸ್‌ನಲ್ಲಿದ್ದ ಪ್ರಯಾಣಿಕರ ಸಂಖ್ಯೆಯ ಬಗ್ಗೆ ನಮಗಿನ್ನೂ ಸ್ಪಷ್ಟ ಮಾಹಿತಿ ದೊರೆತಿಲ್ಲ. ಈಗಾಗಲೇ 13 ಮಂದಿ ಮೃತಪಟ್ಟಿದ್ದು, ಉಳಿದವರು ಗಂಭೀರ ಸ್ಥಿತಿಯಲ್ಲಿದ್ದಾರೆ. ಇಂಧೋರ್‌ನಿಂದ ಪುಣೆಗೆ ತೆರಳುತ್ತಿದ್ದ ವೇಳೆ ಬಸ್ ತಡೆಗೋಡೆ ಮುರಿದು ನದಿಗೆ ಬಿದ್ದಿದೆ. ಬಸ್ ಅನ್ನು ನದಿಯಿಂದ ಮೇಲೆತ್ತಲು ಭಾರೀ ಯಂತ್ರೋಪಕರಣಗಳನ್ನು ನಿಯೋಜಿಸಲಾಗಿದೆ. ರಾಜ್ಯ ವಿಪತ್ತು ನಿರ್ವಹಣಾ ತಂಡವು ಸ್ಥಳದಲ್ಲಿದ್ದು, ಸ್ಥಳೀಯ ಮೀನುಗಾರರೊಂದಿಗೆ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಇಂಧೋರ್ ಮತ್ತು ಧಾರ್‌ನ ಹಿರಿಯ ಅಧಿಕಾರಿಗಳು ರಕ್ಷಣಾ ಕಾರ್ಯ ಪರಿಶೀಲಿಸಲು ಸ್ಥಳಕ್ಕೆ ಧಾವಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಿಕ್ಷಕರು ಸೇರಿ ಐವರು ಅರೆಸ್ಟ್