Select Your Language

Notifications

webdunia
webdunia
webdunia
webdunia

ಬಿಲ್ಡಿಂಗ್ ಕುಸಿಯುವ ಭೀತಿ: ಮನೆತೊರೆದ ನೆರೆಹೊರೆಯವರು

ಬಿಲ್ಡಿಂಗ್ ಕುಸಿಯುವ ಭೀತಿ: ಮನೆತೊರೆದ ನೆರೆಹೊರೆಯವರು
ಆನೇಕಲ್ , ಶುಕ್ರವಾರ, 14 ಸೆಪ್ಟಂಬರ್ 2018 (14:04 IST)
ನಾಲ್ಕು ಅಂತಸ್ತಿನ ಬಿಲ್ಡಿಂಗ್ ಕುಸಿಯುವ ಭೀತಿ ಎದುರಾಗಿದೆ. ಈ ಕುರಿತು ಯಾರ ಬಳಿ ದೂರು ನೀಡಿದರು ಪ್ರಯೋಜನ ಆಗಿಲ್ಲ. ಹೀಗಾಗಿ ಅಕ್ಕಪಕ್ಕದ ಮನೆಯ ನಿವಾಸಿಗಳು ಜೀವಭಯದಿಂದ ತಮ್ಮ ಮನೆಗಳನ್ನೇ ಖಾಲಿ ಮಾಡಿರುವ ಘಟನೆ ನಡೆದಿದೆ.

ಒಬ್ಬ  ಪ್ರಭಾವಿ ವ್ಯಕ್ತಿ ಅಕ್ರಮವಾಗಿ ನಾಲ್ಕು ಅಂತಸ್ತಿನ ಬಿಲ್ಡಿಂಗ್ ನಿರ್ಮಾಣ ಮಾಡುತ್ತಿದ್ದು, ಆ ಬಿಲ್ಡಿಂಗ್‌ ನಿರ್ಮಾಣ ಹಂತದಲ್ಲೇ ಕುಸಿಯುವ ಭೀತಿಯಲ್ಲಿದೆ. ಹೀಗಾಗಿ ಅಕ್ಕ ಪಕ್ಕದ ಮನೆಯವರು ಪ್ರತಿನಿತ್ಯ ಭಯದಿಂದ ಜೀವನ ನಡೆಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಆನೇಕಲ್ ಹೊರವಲಯದ ಬನ್ನೇರುಘಟ್ಟ ಸಮೀಪದ ಹುಳ್ಳಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಗೊಟ್ಟಿಗೆರೆಯ ಸಾಜಾರಾಮ್ ಎಂಬಾ ಪ್ರಭಾವಿ ವ್ಯಕ್ತಿ ಗ್ರಾಮ ಪಂಚಾಯತಿಯಲ್ಲಿ ಯಾರ  ಅನುಮತಿ ಪಡೆಯದೆ  ನಾಲ್ಕು ಅಂತಸ್ತಿನ ಬಿಲ್ಡಿಂಗ್ ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ಆ ಕಟ್ಟಡ  ನಿರ್ಮಾಣ ಹಂತದಲ್ಲೇ ಕುಸಿಯುವ ಭೀತಿಯಲ್ಲಿದೆ. ಅಲ್ಲಿನ ಅಕ್ಕ ಪಕ್ಕದ ಮನೆಯವರು  ಭಯದ ವಾತವರಣದಲ್ಲಿ ಪ್ರತಿನಿತ್ಯ ಜೀವನ ನಡೆಸುತ್ತಿದ್ದಾರೆ. ಬಿಲ್ಡಿಂಗ್ ಈಗಾಗಲೇ  ವಾಲಿಕೊಂಡಿದ್ದು ಇದರಿಂದ ಪಕ್ಕದ ಮನೆಗೆ ಬಹಳಷ್ಟು ಹಾನಿಯಾಗಿದೆ. ಮನೆಯ ಸಂಪೂರ್ಣ ಭಾಗದಷ್ಟು ಬಿರುಕು ಬಿಟ್ಟು ಕುಸಿಯುವ ಭೀತಿಯಲ್ಲಿದೆ. ಜೀವಭಯದಲ್ಲಿ ಅಕ್ಕಪಕ್ಕದ ಮನೆಯವರು ಜೀವನ ನಡೆಸುತ್ತಿದ್ದಾರೆ. ಇನ್ನು  ಕೂಲಿ ನಾಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಬಡ ಕುಟುಂಬದವರು ಯಾವ ಅಧಿಕಾರಿಯ  ಬಳಿಯೂ ಹೇಳಿಕೊಂಡರು ಸಹ ಪ್ರಯೋಜನವಾಗಿಲ್ಲ. 

ಬೀಳುವ ಪರಿಸ್ಥಿತಿಯಲ್ಲಿರುವ  ಮನೆಯಲ್ಲಿ ಸಣ್ಣ ಪುಟ್ಟ ಮಕ್ಕಳಿದ್ದು ರಾತ್ರಿ ನಿದ್ರೆ ಇಲ್ಲದೆ ಜೀವನ ನಡೆಸುತ್ತಿದ್ದಾರೆ. ಅನಿವಾರ್ಯವಾಗಿ ಮನೆಯನ್ನು ಖಾಲಿ ಮಾಡಿಕೊಂಡು ಬೇರೆಡೆ ಬಾಡಿಗೆ ಮನೆಗೆ ಹೋಗುತ್ತಿದ್ದಾರೆ. ಬಹುತೇಕ ಅಕ್ಕ ಪಕ್ಕದ ಮನೆಯವರು ತಮ್ಮ ಮನೆಗಳನ್ನು ಖಾಲಿ ಮಾಡಿಕೊಂಡು ಬೇರೆಡೆ ಹೋಗಿದ್ದಾರೆ.

 

 

Share this Story:

Follow Webdunia kannada

ಮುಂದಿನ ಸುದ್ದಿ

ಸುಪ್ರೀಂಕೋರ್ಟ್‍ನ ನೂತನ ಮುಖ್ಯ ನ್ಯಾಯಾಧೀಶರಾಗಿ ನ್ಯಾ. ರಂಜನ್ ಗಗೋಯ್ ನೇಮಕ