ಮಾಜಿ ಸಿ.ಎಂ. ಬಿ.ಎಸ್. ಯಡಿಯೂರಪ್ಪ ಶಿವಮೊಗ್ಗದಲ್ಲಿ ನಿನ್ನೆ ಫುಲ್ ರಿಲ್ಯಾಕ್ಸ್ ಮೂಡಿಗೆ ಜಾರಿದ್ರು. ನಗರದ ಮೀನಾಕ್ಷಿ ಭವನ್ನಲ್ಲಿ ದೋಸೆ ಸವಿದ ಬಳಿಕ ಸಿನಿಮಾ ವೀಕ್ಷಣೆ ಮಾಡಿದ್ದಾರೆ. ಪುತ್ರ ಮತ್ತು ಸಂಸದ ಬಿ.ವೈ. ರಾಘವೇಂದ್ರ, ಸೊಸೆ ತೇಜಸ್ವಿನಿ ರಾಘವೇಂದ್ರ ಸೇರಿದಂತೆ ಆಪ್ತರೊಂದಿಗೆ ಸಿನಿಮಾ ವೀಕ್ಷಣೆ ಮಾಡಿದ್ರು. ಬಹಳ ವರ್ಷಗಳ ಬಳಿಕ ಯಡಿಯೂರಪ್ಪ ಅವರು ಥಿಯೇಟರ್ಗೆ ತೆರಳಿ ರಾಜಕೀಯ ಜಂಜಾಟ ಮರೆತು ಸಿನಿಮಾ ವೀಕ್ಷಿಸಿದ್ದಾರೆ. ಶಿವಮೊಗ್ಗ ನಗರದ ಸಿಟಿ ಸೆಂಟರ್ ಮಾಲ್ನಲ್ಲಿರುವ ಭಾರತ್ ಸಿನಿಮಾಸ್ನಲ್ಲಿ ದಿ. ಪುನೀತ್ ರಾಜ್‍ಕುಮಾರ್ ಅವರ ಮಹತ್ವಕಾಂಕ್ಷೆಯ ಗಂಧದಗುಡಿ ಸಿನಿಮಾ ವೀಕ್ಷಣೆ ಮಾಡಿದ್ದು, ಅಪ್ಪು ಮೇಲಿನ ಅವರ ಅಭಿಮಾನ ವ್ಯಕ್ತಪಡಿಸಿದ್ದಾರೆ.