Select Your Language

Notifications

webdunia
webdunia
webdunia
webdunia

ಮೋದಿಯ ಸ್ವಚ್ಛತೆಯ ಪಾಠ ಮಾಡಿದ ಬಿ.ಎಸ್.ಪಿ ಶಾಸಕ!

ಬಿ.ಎಸ್.ಪಿ.
ಪ್ರಧಾನಿ ನರೇಂದ್ರ ಮೋದಿಯವರ ಹಾದಿಯನ್ನು ರಾಜ್ಯದ ಏಕೈಕ ಬಿ.ಎಸ್.ಪಿ. ಶಾಸಕರು ಹಿಡಿದಿದ್ದಾರಾ? ಇಂತಹದ್ದೊಂದು ಚರ್ಚೆ ಶುರುವಾಗಿದೆ.  

ಮೋದಿಯ ಸ್ವಚ್ಛತಾ ಪಾಠವನ್ನ ಕೊಳ್ಳೇಗಾಲದ ಶಾಸಕ ಎನ್.ಮಹೇಶ್  ಚೆನ್ನಾಗಿಯೇ ಕಲಿತಂತಿದೆ. ಹೀಗಾಗಿಯೇ  ಸ್ಚಚ್ಛತೆಯ ಪಾಠವನ್ನು ಜನರಿಗೆ ಬೋಧನೆ ಮಾಡಿದ್ದಾರೆ.

ಚಾಮರಾಜನಗರದ ಕಸ್ತೂರು ಬಂಡಿಜಾತ್ರೆಯಲ್ಲಿನ ಜನರಿಗೆ ಎನ್.ಮಹೇಶ್ ರಿಂದ ಸ್ವಚ್ಛತೆಯ ನೀತಿ ಪಾಠವಾಗಿದೆ.
ತಾಲೂಕಿನ ಕಸ್ತೂರಿನಲ್ಲಿ ನಡೆದ ದೊಡ್ಡಮ್ಮತಾಯಿಯ ಬಂಡಿಜಾತ್ರೆಯಲ್ಲಿ ಮಾತಾಡಿದ ಎನ್.ಮಹೇಶ್, ಮೋದಿಯವರು ನ್ಯಾಪ್ಕಿನ್ ತೆಗೆದು ತಮ್ಮ ಕಿಸೆಯಲ್ಲಿ ಹಾಕಿಕೊಂಡ್ರು.

ಇದು ಮೋದಿಯವರು ನನ್ನಂತೆಯೇ ಫಾಲೋ ಮಾಡಿ ಅಂತ ತೋರಿಸುವ ಸಿಂಬಲ್.  ಜಾತ್ರೆಯಲ್ಲಿ ಸಾಕಷ್ಟು ಕಸಗಳನ್ನು ಹಾಕುತ್ತೇವೆ. ಅನೈರ್ಮಲ್ಯ ಮಾಡುತ್ತೇವೆ. ನಮ್ಮ ಕೆಲಸವನ್ನ ನಾವೆ ಮಾಡಿಕೊಳ್ಳಬೇಕು. ಸ್ವಚ್ಛತೆಯನ್ನ ಕಾಪಾಡಬೇಕು ಎಂದು ಮನವಿ ಮಾಡಿದರು.




Share this Story:

Follow Webdunia kannada

ಮುಂದಿನ ಸುದ್ದಿ

ಸಂಕ್ರಾಂತಿ ಹಬ್ಬಕ್ಕೆ ಜನರಿಗೆ ತೆಲಂಗಾಣ ಸಿಎಂಯಿಂದ ಭರ್ಜರಿ ಗಿಫ್ಟ್