Publish Date: Mon, 08 Oct 2018 (19:26 IST)
Updated Date: Mon, 08 Oct 2018 (19:29 IST)
ಬಿಎಸ್ಪಿ ಹಾಗೂ ಕಾಂಗ್ರೆಸ್ ಮಧ್ಯಪ್ರದೇಶದಲ್ಲಿ ಮಹಾಮೈತ್ರಿಯಿಂದ ದೂರ ಸರಿದ ಲಾಭ ನೇರವಾಗಿ ಬಿಜೆಪಿಗೆ ಆಗಲಿದೆ. ಹೀಗಂತ ಕಾಂಗ್ರೆಸ್ ಮುಖಂಡ ಹೇಳಿದ್ದಾರೆ.
ಬಿಎಸ್ಪಿ ಯಾವ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳದೇ ಏಕಾಂಗಿಯಾಗಿ ಸ್ಪರ್ಧೆ ಮಾಡುವುದಕ್ಕೆ ಮುಂದಾಗಿರುವ ಹಿನ್ನೆಲೆಯಲ್ಲಿ ಅದರಿಂದ ಬಿಜೆಪಿಗೆ ಹೆಚ್ಚು ಲಾಭವಾಗಲಿದೆ. ಹೀಗಂತ ಮಧ್ಯಪ್ರದೇಶದ ಕಾಂಗ್ರೆಸ್ ಅಧ್ಯಕ್ಷ ಕಮಲನಾಥ್ ಹೇಳಿದ್ದಾರೆ.
ಮಹಾಮೈತ್ರಿಯ ವಿಫಲತೆಯಿಂದ ಕಮಲ ಪಾಳೆಯಕ್ಕೆ ಅನುಕೂಲವಾಗುತ್ತದೆ ಎಂದಿರುವ ಅವರು, ಬಿಜೆಪಿಯನ್ನು ಸೋಲಿಸಲು ಮಹಾಮೈತ್ರಿ ಅನಿವಾರ್ಯ ಎಂದು ಪ್ರತಿಪಾದಿಸಿದ್ದಾರೆ.
ಮಧ್ಯಪ್ರದೇಶದಲ್ಲಿ ಚುನಾವಣೆ ಹೊಸ್ತಿಲಲ್ಲಿ ಕಮಲನಾಥ್ ರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.