Publish Date: Mon, 08 Oct 2018 (18:54 IST)
Updated Date: Mon, 08 Oct 2018 (18:56 IST)
ರಾಮನಗರ, ಜಮಖಂಡಿ ವಿಧಾನಸಭೆ ಹಾಗೂ ಬಳ್ಳಾರಿ, ಶಿವಮೊಗ್ಗ ಹಾಗೂ ಮಂಡ್ಯ ಲೋಕಸಭೆ ಉಪಚುನಾವಣೆ ಕಾವು ರಂಗೇರುತ್ತಿದೆ. ಏತನ್ಮಧ್ಯೆ, ಉಪಚುನಾವಣೆಯ ಹೊಣೆ ಅಥವಾ ನಾಯಕತ್ವ ಹೊರಲು ಕೈ ಪಾಳೆಯದಲ್ಲಿ ಮುಖಂಡರು ಹಿಂದೇಟು ಹಾಕುತ್ತಿದ್ದಾರೆ.
ಒಂದೊಮ್ಮೆ ಸಚಿವ ಸಂಪುಟ ವಿಸ್ತರಣೆಯ ಕಾವು ಒಡಲಲ್ಲಿ ಇಟ್ಟುಕೊಂಡಿರುವ ಕಾಂಗ್ರೆಸ್ ಈಗ ಮತ್ತೊಂದು ಪೇಚಿಗೆ ಸಿಲುಕುತ್ತಿದೆ. ಉಪಚುನಾವಣೆ ಕಾವು ರಂಗೇರುತ್ತಿರುವಂತೆ ಚುನಾವಣೆಯ ನೇತೃತ್ವವನ್ನು ಯಾರು ವಹಿಸಬೇಕು ಎಂಬ ಚರ್ಚೆ ಕಾಂಗ್ರೆಸ್ ನಲ್ಲಿ ಗೊಂದಲ ಹಾಗೂ ದ್ವಂದ್ವ ನಿಲುವುಗಳಿಗೆ ಕಾರಣವಾಗುತ್ತಿದೆ.
ಕೆಪಿಸಿಸಿ ಅಧ್ಯಕ್ಷ ಸೇರಿದಂತೆ ಪ್ರಮುಖ ನಾಯಕರು ಚುನಾವಣೆಯ ನೇತೃತ್ವವಹಿಸಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಚರ್ಚೆ ಶುರುವಾಗಿದೆ.